ಮೈಸೂರು

‘ಯೋಗ ಸ್ಟಾಪ್ಸ್ ಟ್ರಾಫಿಕ್’ ; ಮಾ.5ರಂದು

ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಿಂದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ‘ಯೋಗ ಸ್ಟಾಪ್ಸ್ ಟ್ರಾಫಿಕ್’ ಅನ್ನು ಮಾ.5ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನದ ಬಳಿ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ನಿರ್ದೇಶಕ ಪರಶು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿ ಕಾರ್ಯಕ್ರಮದ ಮೂಲಕ ಸಂಸ್ಥೆಯ ಅಂತರರಾಷ್ಟ್ರೀಯ ಸಂಘಟನೆ ಚಾಲನೆಗೊಳ್ಳಲಿದೆ. ಜಿಲ್ಲಾಧಿಕಾರಿ ಡಿ.ರಂದೀಪ್, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಸಂಪಾದಕ ರಾಜಶೇಖರ ಕೋಟಿ, ಫಿನ್ ಲ್ಯಾಂಡ್‍ನ ಯೋಗ ಪ್ರತಿನಿಧಿ ಸರಿಯ ಪಾಲ್ಗೊಳ್ಳುವರು ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ  ಮಾನವ ಸಾಗಾಣಿಕೆಯು ಬೃಹತ್ ಉದ್ಯಮವಾಗಿದ್ದು ಬಾಂಗ್ಲಾ, ನೇಪಾಳ, ಕಾಂಬೋಡಿಯ ಸೇರಿದಂತೆ ಹಲವಾರು ದೇಶಗಳಿಂದ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದ್ದು ಇದನ್ನು ನಿಯಂತ್ರಿಸಲು ಸರ್ಕಾರಗಳು ವಿಫಲವಾಗಿವೆ ಎಂದರು.

ಯುದ್ಧ, ನೈಸರ್ಗಿಕ ವಿಕೋಪ, ಬಡತನ,ಹಸಿವು, ರಾಜಕೀಯ ಅರಾಜಕತೆ ಮಾನವ ಸಾಗಾಣಿಕೆ ಗುಪ್ತಗಾಮಿನಿಯಂತೆ ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಸಂಸ್ಥೆಯ ಮತ್ತೊರ್ವ ನಿರ್ದೇಶಕ ಸ್ಟ್ಯಾನ್ಲಿ ಕಳವಳ ವ್ಯಕ್ತಪಡಿಸಿದರು, ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ‘ಯೋಗ ಸ್ಟಾಪ್ಸ್ ಟ್ರಾಫಿಕ್‍’ ‘ಒಂದು ದಿನ-ಒಂದು ಧ್ವನಿ’ ಎನ್ನುವ ಘೋಷವಾಕ್ಯದಡಿ ಮಾನವ ಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ನಗರದ ಪ್ರತಿ ಶಾಲಾ, ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು, ಸಂಸ್ಥೆಯ ಮಹಿಳೆಯರು, ಕಾರ್ಯಕರ್ತರು, ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು ತಿಳಿಸಿದರು. ಫಿನ್‍ ಲ್ಯಾಂಡ್ ಯೋಗಪಟು ಸರಿಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: