ಮೈಸೂರು

ಮಹಾಕವಿ ಸರ್ವಜ್ಞ ಜಯಂತಿ : ಮಾ.5ಕ್ಕೆ

ಮಹಾಕವಿ ಸರ್ವಜ್ಞ ಜಯಂತಿಯನ್ನು ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ಕುಂಬಾರರ ಸಂಘ ಸಂಸ್ಥೆಯ ಸಹಯೋಗದೊಂದಿಗೆ ಮಾ.5ರ ಬೆಳಿಗ್ಗೆ 11ಗಂಟೆಗೆ, ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು, ಸಚಿವ ತನ್ವೀರ್ ಸೇಠ್, ಶಾಸಕರಾದ ವಾಸು, ಮಹಾಪೌರ ಎಂ.ಜೆ.ರವಿಕುಮಾರ್, ವಿಧಾನಪರಿಷತ್ ಉಪಸಭಾಪತಿ  ಮರಿತಿಬ್ಬೇಗೌಡ, ಜಿ.ಪಂ.ಅಧ್ಯಕ್ಷೆ ನಯಿಮಾ ಸುಲ್ತಾನಾ ನಜೀರ್ ಅಹಮ್ಮದ್ ಹಾಗೂ ಇತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.

ಬೆಳಿಗ್ಗೆ 9.30ರಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಜಾನಪದ ಕಲಾತಂಡ ಹಾಗೂ ಪೂರ್ಣ ಕುಂಭದೊಂದಿಗೆ ಮೆರವಣಿಗೆಯು ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಲಾಮಂದಿರ ಸೇರುವುದು, ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಅಧಿಕ ಕುಲಬಾಂಧವರು ಪಾಲ್ಗೊಲ್ಳುವರು ಎಂದು ತಿಳಿಸಿದರು.

ಉಪಾಧ್ಯಕ್ಷ ಹೆಚ್.ಸುಂದರ್, ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮಶೇಖರ್, ಖಜಾಂಚಿ ಎಸ್.ಹೆಚ್.ನಾಗರಾಜು, ಮೈಸೂರು ವಿಭಾಗದ ಹರೀಶ್, ನಾಗಣ್ಣ ಕೇರಗಹಳ್ಳಿ, ಕೆ.ಪಿ.ವೆಂಕಟೇಶ್, ಎಂ.ಮಾರಶೆಟ್ಟಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Leave a Reply

comments

Related Articles

error: