ಮೈಸೂರು

ರಾಷ್ಟ್ರೀಯ ಮಟ್ಟದ ಬಹುಮಾನ ವಿಜೇತರಿಗೆ ಅಭಿನಂದನೆ

ಹೈದರಾಬಾದ್ ನ ಎಂ.ಎಲ್.ಆರ್ ತಾಂತ್ರಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನ’ದಲ್ಲಿ ಮೈಸೂರಿನ ಬಿ.ಎನ್. ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.

ಟೆಲಿಗ್ರಾಫ್ ಇನ್ ಬಾರ್ಡರ್ ಸೆಕ್ಯೂರಿಟಿ ಎಂಬ ವಿಷಯದ ಬಗ್ಗೆ ವಸ್ತುಪ್ರದರ್ಶನ ನೀಡಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಈ ಬಹುಮಾನವು 60 ಸಾವಿರ ರೂ. ಬೆಲೆಬಾಳುವ ಲ್ಯಾಪ್ ಟಾಪ್ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ಈ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಮಾದರಿಯು ‘ಮೇಕ್ ಇನ್ ಇಂಡಿಯಾ’ ಗೆ ಆಯ್ಕೆಯಾಗಿದೆ.

ಬಹುಮಾನ ಗಳಿಸಿದ ಎನ್.ಎಂ.ಪ್ರತಾಪ್ ಮತ್ತು ಕೆ.ಎಸ್.ರಜತ್ ಅವರನ್ನು ಕಾಲೇಜಿನ ಕಾರ್ಯನಿರ್ವಾಹಕರು, ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Leave a Reply

comments

Related Articles

error: