ಕರ್ನಾಟಕ

ಹುಟ್ಟಿದ ಒಂಭತ್ತೇ ದಿನಕ್ಕೆ ಉಸಿರುಗಟ್ಟಿಸಿ ಮಗುವಿನ ಕೊಲೆ

ಬೆಂಗಳೂರು,.30-ಮಗು ಹುಟ್ಟಿದ ಒಂಭತ್ತೇ ದಿನಕ್ಕೆ ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಮಿಳ್ ಸೆಲ್ವಿ ಮಗುವನ್ನು ಕಳೆದುಕೊಂಡ ನತದೃಷ್ಟೆ. ಮಗುವಿನ ಅಜ್ಜಿ ಪರಮೇಶ್ವರಿ ಮೇಲೆ ಸೆಲ್ವಿ ಕೊಲೆಯ ಆರೋಪ ಹೊರಿಸಿದ್ದಾರೆ. ಹೆಣ್ಣು ಮಗು ಜನಿಸಿದೆ ಎನ್ನುವ ಕಾರಣಕ್ಕೆ ಮಗುವನ್ನ ಉಸಿರುಗಟ್ಟಿಸಿ ಸಾಯಿಸಿರುವ ಅನುಮಾನವಿದೆ.

ನಿನ್ನೆ ರಾತ್ರಿ ಮಗುವಿಗೆ ಹಾಲುಣಿಸಿ ಆಟವಾಡಿಸುತ್ತಿದ್ದೆ. ಬಳಿಕ ಮಗುವನ್ನು ಅತ್ತೆ ಕೈಗೆ ಕೊಟ್ಟು ಅಡುಗೆ ಮನೆಗೆ ಹೋಗಿದ್ದೆ. ಬಂದು ನೋಡುವಷ್ಟರಲ್ಲಿ ಅತ್ತೆ ಕೈಯಲ್ಲಿ ಮಗು ಇರಲಿಲ್ಲ. ಮಗುವನ್ನ ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದು ಅತ್ತೆ ಹೇಳಿದ್ದಳು. ಅಕ್ಕಪಕ್ಕದ ಮನೆ ಹಾಗೂ ಮನೆಯ ಸುತ್ತ ಹುಡುಕಾಟ ನಡೆಸಿದೆವು. ಈ ವೇಳೆ ಮನೆ ಹಿಂಭಾಗದಲ್ಲಿ ಮಗು ಬಿದ್ದಿತ್ತು ಎಂದು ಸೆಲ್ವಿ ದೂರಿನಲ್ಲಿ ತಿಳಿಸಿದ್ದಾರೆ. ಮಗುವಿನ ಕತ್ತಿನ ಬಳಿ ಗಾಯದ ಗುರುತು ಪತ್ತೆಯಾಗಿದೆ.

ಸದ್ಯ, ಮಗು ಶವವನ್ನು ಸಪ್ತಗಿರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)

Leave a Reply

comments

Related Articles

error: