ಮೈಸೂರು

ಕೈಕುಲುಕಿ   ಪರಸ್ಪರ ಮಾತುಕತೆ ನಡೆಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ – ಸಾ.ರಾ ಮಹೇಶ್

ಮೈಸೂರು,ನ.30:- ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಚಾರದ ವೇಳೆ ಜೆಡಿಎಸ್-ಕಾಂಗ್ರೆಸ್  ಶಾಸಕರು ಫುಲ್ ಖುಷ್ ಆಗಿರುವುದು ಕಂಡು ಬಂತು.

ಕೈಕುಲುಕಿದ  ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ  ಶಾಸಕ ಸಾ.ರಾ ಮಹೇಶ್ ಪರಸ್ಪರ ಮಾತುಕತೆ ನಡೆಸಿದರು. ಹುಣಸೂರಿನ ಗೌಡಗೆರೆಯಲ್ಲಿ ಪ್ರಚಾರ ಮಾಡುವಾಗ ಮುಖಾಮುಖಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದರು. ಉಭಯ ಶಾಸಕರ ಬಹಿರಂಗ ಮಾತುಕತೆ ಹುಣಸೂರು ಕ್ಷೇತ್ರದ್ಯಾಂತ ಚರ್ಚೆಗೆ ಗ್ರಾಸವಾಯಿತು. ಹುಣಸೂರಿನಲ್ಲಿ ಹಳ್ಳಿಹಕ್ಕಿ ಮಣಿಸಿಲು  ಜೆಡಿಎಸ್- ಕಾಂಗ್ರೆಸ್ ಮತ್ತೆ ಒಂದಾಗ್ತಾರಾ? ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡುತ್ತಾ? ಎಂಬ ಪ್ರಶ್ನೆ ಎದ್ದಿದ್ದು, ಈಗಾಗಲೇ ಅನರ್ಹ ಶಾಸಕ ವಿಶ್ವನಾಥ್ ಸೋಲಿಸುವುದೇ ನಮ್ಮ‌ ಗುರಿ ಎಂದು ಹಿರಿಯ ನಾಯಕರಾದ ಸಿದ್ದರಾಮಯ್ಯ,  ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ವೇಳೆ ಕೆ ಆರ್ ನಗರ ಕಾಂಗ್ರೆಸ್ ಮುಖಂಡ ರವಿಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿಜೆ ವಿಜಯಕುಮಾರ್ ಕೂಡ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: