ದೇಶಪ್ರಮುಖ ಸುದ್ದಿ

ಪಾತಕಿಗಳನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಸುಟ್ಟುಬಿಡಿ: ಪಶುವೈದ್ಯೆ ತಾಯಿಯ ಆಕ್ರೋಶಭರಿತ ಮಾತು

ಹೈದರಾಬಾದ್,ನ.30-ತನ್ನ ಮಗಳ ಸಾವಿಗೆ ಕಾರಣರಾದ ಪಾತಕಿಗಳನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ಸುಟ್ಟುಬಿಡಿ. ಇದು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಪಶುವೈದ್ಯೆ ಅವರ ತಾಯಿ ಆಕ್ರೋಶಭರಿತ ಮಾತುಗಳು.

ಅಮಾಯಕ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆಗೈಯುವ ಇಂತಹ ಪಾತಕಿಗಳನ್ನು ಸಾರ್ವಜನಿಕವಾಗಿ ಜೀವಂತ ದಹನ ಮಾಡಬೇಕು. ಅಪರಾಧಿಗಳನ್ನು ಹೈದರಾಬಾದ್‌ನ ರಾಜೀವ್‌ ಗಾಂಧಿ ವಿಮಾನ ನಿಲ್ದಾಣಕ್ಕೂ, ಸಂಶಾಬಾದ್‌ ಪೊಲೀಸ್‌ ಸ್ಟೇಷನ್‌ಗೂ ತಿರುಗಾಡಿಸುವ ಬದಲು ಒಮ್ಮಲೇ ಸುಟ್ಟುಬಿಡಿ. ಆಗಲಾದರೂ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಪೊಲೀಸರ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನನ್ನ ಮಗಳು ಏನೂ ತಿಳಿಯದ ಅಮಾಯಕಿ. ಅವಳು ಅಪಾಯದಲ್ಲಿ ಸಿಲಿಕಿದ್ದಾಗ ತನ್ನ ತಂಗಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿರುವುದೇ ನಮಗೆ ತಿಳಿದಿಲ್ಲ. ಇಂತಹ ಕಿಡಿಗೇಡಿಗಳನ್ನು ಜೀವಂತವಾಗಿ ಸಡಬೇಕು ಎಂದು ಒತ್ತಾಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: