ಪ್ರಮುಖ ಸುದ್ದಿಮನರಂಜನೆ

ಗೆಳೆಯ ನಟ ಕಿರಣ್ ನನ್ನು ವರಿಸಿದ  ನಟ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್

ರಾಜ್ಯ(ಬೆಂಗಳೂರು)ಡಿ.2:- ಹಿರಿಯ ನಟ ಸಿಹಿಕಹಿ ಚಂದ್ರು ಪುತ್ರಿ  ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ನಟ ಕಿರಣ್ ಶ್ರೀನಿವಾಸ್ ಅವರನ್ನು ವರಿಸುವ ಮೂಲಕ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿನ್ನೆ ನಟಿ ಹಿತಾ ಚಂದ್ರಶೇಖರ್‌ ಗುರು ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಕಿರಣ್ ಶ್ರೀನಿವಾಸ್  ಕೈ ಹಿಡಿದು ಸಪ್ತಪದಿ ತುಳಿದರು.

ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿದೆ. ಅನುಪಮಾ ಗೌಡ, ಕೃಷಿ ತಾಪಂಡ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆ ಕಲಾವಿದರು ಮದುವೆಗೆ ಆಗಮಿಸಿ ನವ ಜೋಡಿಗೆ ಶುಭ ಕೋರಿದ್ದಾರೆ. ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ನಟಿ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಚಂದ್ರಶೇಖರ್ ಅವರು ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: