ಕರ್ನಾಟಕ

ಪತ್ನಿಯನ್ನು ಕೊಂದು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಪತಿ

ಗೌರಿಬಿದನೂರು,ಡಿ.2-ಪತ್ನಿಯನ್ನು ಕೊಲೆಗೈದು ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ ಪತಿರಾಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪವಿತ್ರ(24) ಕೊಲೆಯಾದವರು. ಆನಂದ್ ಪತ್ನಿಯನ್ನು ಕೊಲೆಗೈದು ರಾಜ್ಯ ಹೆದ್ದಾರಿಯಲ್ಲಿ ಮಲಗಿಸಿ ಅಪಘಾತವಾಗಿ ಹೆಂಡತಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಆನಂದ್ ಮತ್ತು ಪವಿತ್ರ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಎರಡು ವರ್ಷದ ಬಳಿಕ ಇಬ್ಬರ ನಡುವೆ ಹೊಂದಾಣಿಕೆಯಿಲ್ಲದೆ ಜಗಳವಾಗುತ್ತಿದ್ದ ಕಾರಣ ಪವಿತ್ರ ಪೆರೇಸಂದ್ರದ ತನ್ನ ತವರು ಮನೆ ಸೇರಿದ್ದಳು.

ಶನಿವಾರ ಸಂಜೆ ಪತಿ ಆನಂದ ಕರೆಮಾಡಿ ಪವಿತ್ರಾಳನ್ನು ಕರೆಸಿಕೊಂಡು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ. ತಾಲೂಕಿನ ಕಲಿನಾಯಕನಹಳ್ಳಿ ಸಮೀಪದ ಕ್ರಿಶ್ಚಿಯನ್‌ ಕಾಲೊನಿ ಬಳಿ ಬಂದಾಗ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಆನಂದ್‌ ಆಕೆಯ ವೇಲ್‌ನಿಂದಲೇ ಕುತ್ತಿಗೆ ಬಿಗಿದು ಸಾಯಿಸಿದ್ದಾನೆ. ಕೊನೆಗೆ ಶವವನ್ನು ಕಿಶ್ಚಿಯನ್‌ ಕಾಲೊನಿ ಕ್ರಾಸ್‌ ಬಳಿಸಿ ಹೆದ್ದಾರಿಯಲ್ಲಿ ಮಲಗಿಸಿ ಅಪಘಾತವಾಗಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದಾನೆ. (ಎಂ.ಎನ್)

Leave a Reply

comments

Related Articles

error: