ಮೈಸೂರು

ಹೆಚ್ಚುತ್ತಿರುವ ಅಪೌಷ್ಠಿಕತೆಯ ವಿರುದ್ಧ ಹೋರಾಡುವ ಅಗತ್ಯವಿದೆ : ಡಿ.ರಂದೀಪ್

ರಾಷ್ಟ್ರ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಅಪೌಷ್ಠಿಕತೆಯೂ ಒಂದಾಗಿದ್ದು, ದೇಶದಲ್ಲಿ ಇದರ ಪ್ರಮಾಣ ಹೆಚ್ಚುತ್ತಿದೆ. ಅಪೌಷ್ಠಿಕತೆಯ ವಿರುದ್ಧ ಹೋರಾಡಬೇಕಾಗಿರುವ  ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಮೈಸೂರಿನ ಸಿಎಫ್ ಟಿಆರ್ ಐನ ಅಸೆಂಬ್ಲಿ ಹಾಲ್ ನಲ್ಲಿ ನಡೆದ ಸಿಎಸ್ ಐ ಆರ್ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ಅಪೌಷ್ಠಿಕತೆ ಕುರಿತ ಸವಾಲುಗಳು, ಯಶೋಗಾಥೆಗಳು, ಮುಂದಿನ ದಾರಿ ಕುರಿತ ರಾಷ್ಟ್ರೀಯ ಸಮಾವೇಶವನ್ನು ಡಿ.ರಂದೀಪ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೈಸೂರು ಜಿಲ್ಲೆಯಲ್ಲಿ 324ಮಂದಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ದೇಶದಲ್ಲಿ ಶೇ.56ರಷ್ಟು ಮಂದಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಠಿಕತೆ ತಡೆಯುವಲ್ಲಿ ತಾಯಿಯ ಹಾಲು ಪೂರಕವಾಗಿದ್ದು, ಹಾಲೂಡಿಸುವ ತಾಯಂದಿರು ಎರಡು ವರ್ಷಗಳ ಕಾಲ ಮಗುವಿಗೆ ಎದೆಹಾಲನ್ನೇ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ಜೆಎಸ್‍ಡಬ್ಯು ಫೌಂಡೇಷನ್‍ನ ಡಾ.ಸಿ.ಎಸ್.ಕೇದರ್, ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್, ಸಿಎಸ್‍ಐಆರ್-ಸಿಎಫ್‍ಟಿಆರ್‍ಐನ ಡಾ.ಆರ್.ಶಾರದಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: