ಮನರಂಜನೆ

ಯಶ್-ರಾಧಿಕಾರ ಮುದ್ದಾದ ಮಗಳು ಆಯ್ರಾಳಿಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು,ಡಿ.2-ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ರ ಮುದ್ದಿನ ಮಗಳು ಆಯ್ರಾಳಿಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಗಳ ಹುಟ್ಟುಹಬ್ಬದ ಸಂತಸದಲ್ಲಿ ಯಶ್ ಹಾಗೂ ರಾಧಿಕಾ ಇದ್ದಾರೆ.

ಎರಡನೇ ಮಗುವಿನ ಸಂತಸ ನೆಲೆಸಿರುವಾಗಲೇ, ಮೊದಲ ಮಗಳ ಮೊದಲ ಹುಟ್ಟುಹಬ್ಬದ ಸಡಗರವೂ ಜೋರಾಗಿದೆ.

ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಧಿಕಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮಗಳೊಂದಿಗಿನ ಮುದ್ದಾದ ಫೋಟೋವೊಂದನ್ನು ಶೇರ್ ಮಾಡಿ, ನನ್ನ ಹೃದಯ ಹಾಗೂ ಆತ್ಮದ ಒಂದು ಭಾಗ ನೀನು. ಹುಟ್ಟುಹಬ್ಬದ ಶುಭಾಶಯಗಳು ನನ್ನ ದೇವತೆ ಎಂದು ವಿಶ್ ಮಾಡಿದ್ದಾರೆ.

ಇತ್ತೀಚೆಗೆ ಆಯ್ರಾಳ ಫೋಟೋ ಶೂಟ್ ಮಾಡಿಸಿದ್ದರು. ಅದರಲ್ಲಿ ನೀಲಿ, ಬಿಳಿ ಮತ್ತು ಕೆಂಪು ಬಣ್ಣ ಮಿಶ್ರಿತ ಫ್ರಾಕ್ ಧರಿಸಿ, ಕ್ಯಾಮರಾ ಮುಂದೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಳು ಆಯ್ರಾ.

ಯಶ್, ಆಯ್ರಾಳನ್ನು ಬಿಸಿಲಲ್ಲಿ ನೋಡುವುದು ಹೇಗೆ ಮಗಳೇ ಎಂದು ಕೇಳಿದರೆ, ಮೇಲೆ ನೋಡುತ್ತಾ ಮುದ್ದು ಮುದ್ದಾಗಿ ಎಕ್ಸ್ ಪ್ರೆಷನ್ ಕೊಟ್ಟಿದ್ದ ಆಯ್ರಾಳ ವಿಡಿಯೋ ಇತ್ತೀಚೆಗಷ್ಟೇ ಸಖತ್ ವೈರಲ್ ಆಗಿತ್ತು.

ಆಯ್ರಾಳ ಮೊದಲ ಹುಟ್ಟುಹಬ್ಬ ತುಂಬಾ ವಿಶೇಷ. ಯಾಕಂದ್ರೆ ಆಯ್ರಾಳ ಮೊದಲ ಬರ್ತಡೇಗೆ ವಿಶ್ ಮಾಡಲು ಪುಟಾಣಿ ಸಹೋದರ ಎಂಟ್ರಿಕೊಟ್ಟಿದ್ದಾನೆ. ಅಕ್ಟೋಬರ್ 30 ರಂದು ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ತಿಂಗಳ ಕಂದಮ್ಮನ ಆರೈಕೆಯಲ್ಲಿ ರಾಧಿಕಾ ಪಂಡಿತ್ ತೊಡಗಿರುವಾಗಲೇ, ಒಂದು ವರ್ಷದ ಆಯ್ರಾ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾಳೆ.

2018ರ ಡಿಸೆಂಬರ್ 2 ರಂದು ರಾಧಿಕಾ ಪಂಡಿತ್ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಆಯ್ರಾಳಿಗೆ ಜನ್ಮ ನೀಡಿದ್ದರು. (ಎಂ.ಎನ್)

Leave a Reply

comments

Related Articles

error: