ಕ್ರೀಡೆಮೈಸೂರು

ಎನ್‍ ಆರ್‍ ಓಪನ್‍ ಚಾಂಪಿಯನ್‍ ಶಿಪ್ ಮುಕ್ತಾಯ : ಗಾಲ್ಫ್ ಚಾಂಪಿಯನ್‍ ಶಿಪ್‍  ವಿಜೇತರ ಘೋಷಣೆ

ಮೈಸೂರು,ಡಿ.2:-  ಸೈಕಲ್ ಪ್ಯೂರ್‍ ಅಗರ ಬತ್ತೀಸ್‍ ನ ತಯಾರಕರಾದ ಎನ್‍ ಆರ್ ಸಮೂಹವು, ಎನ್‍ ಆರ್ ಮುಕ್ತ ಗಾಲ್ಫ್ ಚಾಂಪಿಯನ್‍ ಶಿಪ್‍ನ ವಿಜೇತರನ್ನು ಘೋಷಿಸಿದೆ.

ಈ ಪಂದ್ಯವನ್ನು ಮೈಸೂರಿನ ಜಯ ಚಾಮರಾಜ ಒಡೆಯರ ಗಾಲ್ಫ್‍ ಕ್ಲಬ್‍ನಲ್ಲಿ ನವೆಂಬರ್ 30ಹಾಗೂ ಡಿಸೆಂಬರ್01ರಂದು ಆಯೋಜಿಸಲಾಗಿತ್ತು.

ಎನ್‍ಆರ್ ಸಮೂಹದಗಾಲ್ಫ್ ಚಾಂಪಿಯನ್‍ಶಿಪ್ ಗಾಲ್ಫ್‍ಉತ್ಸಾಹಿ ಆಟಗಾರರಿಗೆ ಮುಕ್ತ ಪಂದ್ಯಾವಳಿಯಾಗಿದೆ. ಮುಖ್ಯವಾಗಿ ಮೈಸೂರು, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಊಟಿ ಮತ್ತು ಕೊಡೈಕೆನಾಲ್ ಸೇರಿದಂತೆ ವಿವಿಧ ಭಾಗಗಳ ಸುಮಾರು 220ಕ್ಕೂ ಹೆಚ್ಚು ಗಾಲ್ಫ್ ಆಟಗಾರರು ಈ ಎರಡು ದಿನದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, 16 ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಎನ್‍ಆರ್ ಸಮೂಹದ ಆರ್. ಗುರು, ಚೇರ್ಮನ್ ಮತ್ತು ಅರ್ಜುನ್ ರಂಗ, ಎನ್ಆರ್ ಗ್ರೂಪ್ ನ ಪಾಲುದಾರರು ವಿಜೇತರಿಗೆ ಟ್ರೋಫಿ ವಿತರಿಸಿದರು. ಜೆಡಬ್ಲ್ಯೂಜಿಸಿ ಅಧ್ಯಕ್ಷರಾದ ಸಿಎಸ್ ರವಿಶಂಕರ್, ಗೌರವಕಾರ್ಯದರ್ಶಿ,   ಹೆಚ್ ಡಿ ತಿಮ್ಮಪ್ಪ ಗೌಡ,ಕ್ಯಾಪಿಟನ್, ಎಚ್.ಎಸ್. ಅರುಣ್ ಕುಮಾರ್, ಗೌರವ ಖಜಾಂಚಿ, ಡಾ ಎಸ್ ಎಲ್ ನಾರಾಯಣ್, ಸಮಿತಿ ಸದಸ್ಯ,  ಎನ್. ಪರಮೇಶ್ವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂರ್ಭದಲ್ಲಿ ಮಾತನಾಡಿದ ಎನ್‍ ಆರ್ ಸಮೂಹದ  ಅರ್ಜುನ್ ರಂಗ, “ಎನ್‍ ಆರ್‍ ಗಾಲ್ಫ್‍ ಚಾಂಪಿಯನ್‍ ಶಿಪ್ ವರ್ಷದಿಂದ ವರ್ಷಕ್ಕೆ ಯಶಸ್ಸಿನ ಮೈಲಿಗಲ್ಲು ದಾಟುತ್ತಿರುವುದು ನಮಗೆ ಸಂತಸದ ಸಂಗತಿಯಾಗಿದೆ. ಈ ಯಶಸ್ಸು ಹಾಗೂ ಉತೇಜನದಿಂದ ಮುಂದಿನ ದಿನಗಳಲ್ಲಿ ಎಲ್ಲಾ ಹಂತಗಳಲ್ಲಿಯೂ ಪಂದ್ಯಾವಳಿಗಳನ್ನು ಆಯೋಜಿಸಲು ನಮಗೆ ಪುಷ್ಠಿ ದೊರೆತಂತಾಗಿದೆ. ಆಟಗಾರರಿಗೆ ಒಂದು ವೇದಿಕೆ ಒದಗಿಸುವ ಜೊತೆಗೆ ಗಾಲ್ಫ್‍ ಆಟಕ್ಕೂ ಒಂದು ಉತ್ತೇಜನ ನೀಡುವುದು ಎನ್‍ ಆರ್‍ ಗಾಲ್ಫ್ ಚಾಂಪಿಯನ್‍ ಶಿಪ್‍ನ ಆಯೋಜನೆಯ ಹಿಂದಿರುವ ಉದ್ದೇಶವಾಗಿದೆ.”ಎಂದರು.

ಸ್ಟ್ರೋಕ್ ಪ್ಲೇ ಗ್ರೋಸ್ ನಲ್ಲಿ ಧೃವ್ ಬೋಪಣ್ಣ ವಿನ್ನರ್ ಎಂ.ಎಸ್, ಶ್ರೇಯಸ್ ಚಂದ್ರ ರನ್ನರ್ ಆಗಿ, ಸ್ಟೇಬಲ್ ಫ್ರೋಡ್ ಗ್ರೋಸ್ ನಲ್ಲಿ ಎಂ.ಜಿ.ಚೆಂಗಪ್ಪ ವಿನ್ನರ್, ಹುಸೇನ್ ವಘ ರನ್ನರ್ ಆಗಿ, ಸ್ಟ್ರೋಕ್ ಪ್ಲೇ ನೆಟ್ ಲ್ಲಿ  ನಲ್ಲಿ ಬುದ್ಧಿ ಸಾಗರ್ ಎಸ್.ಟಿ. ವಿನ್ನರ್ ಹೆಚ್.ಎಸ್ ಅರುಣ್ ಕುಮಾರ್ ರನ್ನರ್ ಆಗಿ, ಸ್ಟ್ರೋಕ್ ಪ್ಲೇ ನೆಟ್ ಲ್ಲಿ ಪೊ.ಎಂ ಚೆಂಗಪ್ಪ ವಿನ್ನರ್ ಆಗಿ, ಎಂ ರಮೇಸ್ ರನ್ನರ್ ಆಗಿ, ಸ್ಟೇಬಲ್ ಫೋರ್ಡ್ ನೆಟ್ ಲ್ಲಿ ಜೆ.ಎಸ್.ಅರ್ಜುನ್ ವಿನ್ನರ್, ಯಶಸ್ವಿ ಶಂಕರ್ ರನ್ನರ್ ಆಗಿ, ಸ್ಟೇಬಲ್ ಫೋರ್ಡ್ ನೆಟ್(ಹಿರಿಯರಿಗಾಗಿ) ಬಿ.ಕೆ.ಯದುನಾಥ್ ವಿನ್ನರ್  ಹೆಚ್.ಎಸ್ ಗೋಪಿನಾಥ್ ರನ್ನರ್ ಆಗಿ, ಸ್ಟೇಬಲ್ ಫೋರ್ಡ್ ನೆಟ್ ಲ್ಲಿ ಆರ್. ವಿ ಸೀತಾರಾಮಯ್ಯ,(ಸೂಪರ್ ಸೀನಿಯರ್),  ಎಸ್.ಪ್ರದ್ಯೋತ್,(ಕಿರಿಯರು),  ವಿಧಾತ್ರಿ ಕೆ.ಅರಸ್(ಮಹಿಳೆಯರು)  ವಿನ್ನರ್ ಆಗಿಯೂ, ಲಾಂಗೆಸ್ಟ್ ಡ್ರೈವ್ ಎಂ.ಅರ್ಜುನ್ ರಂಗ, ಸ್ಟ್ರೇಟೆಸ್ಟ್ ಡ್ರೈವ್ ಸಿ.ಡಿ.ನಾಗರಾಜನ್, ನಿಯರೆಸ್ಟ್ ಟು ದಿ ಪಿನ್ ಹೆಚ್.ಎಂ.ವಿ ಮೂರ್ತಿ ವಿನ್ನರ್ ಅಗಿಯೂ, ಜೆಡಬ್ಲ್ಯೂ ಜಿಸಿ ಮ್ಯಾಚ್ ಪ್ಲೇ ಚಾಂಪಿಯನ್ ಶಿಪ್ ನಲ್ಲಿ ಮ್ಯಾಚ್ ಪ್ಲೇ ಸಿಂಗಲ್ ಗ್ರೋಸ್ ಧೃವ್ ಭೋಪಣ್ಣ ವಿನ್ನರ್, ಎಂ.ಜಿ.ಚೆಂಗಪ್ಪ ರನ್ನರ್, ಮ್ಯಾಚ್ ಪ್ಲೇ ಚಾಂಪಿಯನ್ ಸಿಂಗಲ್ಸ್ ನೆಟ್ ಇವೆಂಟ್ ಧೃವ್ ಬೋಪಣ್ಣ ವಿನ್ನರ್, ವಿ.ಪ್ರಕಾಶ್ ರನ್ನರ್, ಮ್ಯಾಚ್ ಪ್ಲೇ ಡಬಲ್ಸ್ ನೆಟ್ ಈವೆಂಟ್ ಅಮಿತ್ ಕೊಠಾರಿ & ಎಸ್.ಎ.ಇಮ್ತಿಝಾ, ಮ್ಯಾಚ್ ಪ್ಲೇ ಡಬಲ್ಸ್ ಸೀಗಲ್ಸ್ ನೆಟ್ ಈವೆಂಟ್ ಫಾರ್ ಸೀನಿಯರ್ಸ್ ಎಸ್ ಕೆ.ರಾಮಲಿಂಗೇಗೌಡ ವಿನ್ನರ್, ಸಿ.ಕೆ.ಸುಬ್ರಮಣಿ ರನ್ನರ್ ಆಗಿ ಹೊರಹೊಮ್ಮಿದ್ದಾರೆ. (ಎಸ್.ಎಚ್)

Leave a Reply

comments

Related Articles

error: