ಮನರಂಜನೆ

ಸದ್ದಿಲ್ಲದೇ ನಡೆದ ನಟಿ ನಿತ್ಯಾ ರಾಮ್ ನಿಶ್ಚಿತಾರ್ಥ

ಬೆಂಗಳೂರು,ಡಿ.2- ಇದೇ ತಿಂಗಳ 5,6 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ ನಿತ್ಯಾ ರಾಮ್ ಅವರ ಎಂಗೇಜ್ ಮೆಂಟ್ ಸದ್ದಿಲ್ಲದೆ ಇತ್ತೀಚೆಗೆ ನೆರವೇರಿದೆ.

ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಉದ್ಯಮಿಯೊಂದಿಗೆ ನಿತ್ಯಾ ರಾಮ್ ಅವರ ನಿಶ್ಚಿತಾರ್ಥ ನೆರವೇರಿದೆ. ಅದರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಶ್ಚಿತಾರ್ಥದಲ್ಲಿ ಹಳದಿ ಬಣ್ಣದ ಸೀರೆಯಲ್ಲಿ ನಿತ್ಯ ರಾಮ್ ಕಂಗೊಳಿಸಿದರೆ, ಪೀಚ್ ಕಲರ್ ಕುರ್ತಾದಲ್ಲಿ ನಿತ್ಯ ರಾಮ್ ಭಾವಿ ಪತಿ ಮಿಂಚಿದರು. ಉಂಗುರ ಬದಲಾಯಿಸಿಕೊಂಡ ಫೋಟೋಗಳನ್ನ ನಿತ್ಯ ರಾಮ್ ಇನ್ಸ್ಟಾಗ್ರಾಮ್ ನಲ್ಲಿ ಖುಷಿಯಿಂದ ಶೇರ್ ಮಾಡಿಕೊಂಡಿದ್ದಾರೆ.

ನಿತ್ಯಾ ರಾಮ್ ರನ್ನು ಮದುವೆಯಾಗುತ್ತಿರುವ ಉದ್ಯಮಿಯ ಹೆಸರು, ಹಿನ್ನಲೆ ಬಗ್ಗೆ ನಿತ್ಯ ರಾಮ್ ಕುಟುಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ.

ನಿತ್ಯಾ ರಾಮ್ ‘ಬೆಂಕಿಯಲ್ಲಿ ಅರಳಿದ ಹೂವು’, ‘ಕರ್ಪೂರದ ಗೊಂಬೆ’, ‘ರಾಜಕುಮಾರಿ’, ‘ಎರಡು ಕನಸು’, ನಂದಿನಿ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬರೀ ಕನ್ನಡ ಮಾತ್ರವಲ್ಲದೆ, ತೆಲುಗಿನ ‘ಮುದ್ದು ಬಿಡ್ಡ’, ತಮಿಳಿನ ‘ಅವಳ್’ ಧಾರಾವಾಹಿಗಳಲ್ಲೂ ನಿತ್ಯ ಮಿಂಚಿದ್ದಾರೆ. ಕನ್ನಡದ ‘ಮುದ್ದು ಮನಸು’ ಸಿನಿಮಾದಲ್ಲಿ ನಿತ್ಯ ರಾಮ್ ಅಭಿನಯಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: