ಮೈಸೂರು

ತಲೆಯ ಮೇಲೆ ಮಾರ್ಬಲ್ ಬಿದ್ದು ವ್ಯಕ್ತಿ ಸಾವು

ತಲೆ ಮೇಲೆ ಮಾರ್ಬಲ್ ಬಿದ್ದ ಪರಿಣಾಮ  ವ್ಯಕ್ತಿಯೋರ್ವರು  ಸಾವನ್ನಪ್ಪಿದ ಘಟನೆ ಮೈಸೂರಿನ ನಂಜುಮಳಿಗೆಯ ಬಳಿ ನಡೆದಿದೆ.

ಮೃತನನ್ನು ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕ ನಂದಿ ನಿವಾಸಿ ಗಿರೀಶ್ (26) ಎಂದು ಗುರುತಿಸಲಾಗಿದೆ. ಈತ ನಂಜುಮಳಿಗೆಯ ಬಳಿಯಿದ್ದ ರಾಜಸ್ಥಾನ್ ಮಾರ್ಬಲ್ಸ್ ನಲ್ಲಿ ಲಾರಿಯಿಂದ ಮಾರ್ಬಲ್ ಇಳಿಸುವಾಗ ಆಯತಪ್ಪಿ ಗಿರೀಶ್ ಮೇಲೆ ಮಾರ್ಬಲ್ ಬಿದ್ದಿದ್ದು, ಗಿರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ದುರ್ಘಟನೆ ಸಂಭವಿಸುತ್ತಿದ್ದಂತೆ ರಾಜಸ್ಥಾನ್ ಮಾರ್ಬಲ್ಸ್ ಮಾಲಿಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಲಕ್ಷ್ಮಿಪುರಂ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ  ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

comments

Related Articles

error: