ಕ್ರೀಡೆ

ಬಿಸಿಸಿಐನ 88ನೇ ವಾರ್ಷಿಕ ಮಹಾಸಭೆ: ಕೂಲಿಂಗ್‌ ಆಫ್‌ ಪಿರಿಯಡ್‌ ನಿಯಮಕ್ಕೆ ಬದಲಾವಣೆ ತರಲು ತೀರ್ಮಾನ

ಮುಂಬೈ,ಡಿ.2-ಬಿಸಿಸಿಐ ಆಡಳಿತ ಮಂಡಳಿಯ 88ನೇ ವಾರ್ಷಿಕ ಮಹಾಸಭೆ ನಡೆದಿದೆ. ಗಂಗೂಲಿ ನೇತೃತ್ವದ ಹೊಸ ಆಡಳಿತ ಮಂಡಳಿಯ ಮೊದಲ ಸಭೆ ಇದಾಗಿದ್ದು, ಹಲವು ಆಡಳಿತಾತ್ಮಕ ಸುಧಾರಣೆಗಳಿಗೆ ಆದ್ಯತೆ ನೀಡಲಾಯಿತು.

ಪ್ರಮುಖವಾಗಿ ವಿಶ್ರಾಂತಿ ಅವಧಿಯ ನಿಯಮದಲ್ಲಿ ಬದಲಾವಣೆ ಮಾಡುವ ಮೂಲಕ ಗಂಗೂಲಿಯವರ ಅಧ್ಯಕ್ಷ ಹುದ್ದೆಯನ್ನು 2024ರವರೆಗೆ ಮುಂದುವರಿಸುವ ಮಹತ್ವದ ತೀರ್ಮಾನಕ್ಕೆ ಬರಲಾಯಿತು.

ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ರಚಿಸಲಾಗಿರುವ ಬಿಸಿಸಿಐ ಸಂವಿಧಾನಧಿದಲ್ಲಿನ ಕೂಲಿಂಗ್ಆಫ್ಪಿರಿಯಡ್‌ (ವಿಶ್ರಾಂತಿ ಅವಧಿ) ನಿಯಮಕ್ಕೆ ಬದಲಾವಣೆ ತರಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಆದರೆ, ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಪಟ್ಟಂತೆ ಸಭೆಯಲ್ಲಿ ತಳೆಯಲಾದ ನಿರ್ಧಾರಗಳನ್ನು ಸುಪ್ರೀಂ ಕೋರ್ಟ್ಮುಂದೆ ಪ್ರಸ್ತಾಪಿಸಿ, ಒಪ್ಪಿಗೆ ಪಡೆದುಕೊಂಡ ಬಳಿಕ ಜಾರಿಗೆ ತರಲು ಸಭೆಯಲ್ಲಿದ್ದ ಪ್ರತಿನಿಧಿಗಳು ಒಪ್ಪಿಕೊಂಡರು.

ಇದರಿಂದ ಒಂದು ವರ್ಷದಲ್ಲಿ ಮುಕ್ತಾಯವಾಗಬೇಕಾಗಿದ್ದ ಕಾರ್ಯದರ್ಶಿ ಜಯ್ಶಾ ಅವರ ಹುದ್ದೆಯೂ 2024 ತನಕ ಮುಂದುವರಿಯಲಿದೆ. ಲೋಧಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ರಚಿಸಲಾಗಿರುವ ಸಂವಿಧಾನದ ಪ್ರಕಾರ ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್ಸಂಸ್ಥೆಗಳ ವ್ಯಾಪ್ತಿಗೊಳಪಡುವ ಪದಾಧಿಕಾರಿಗಳು ಮೂರು ವರ್ಷಗಳ 2 ಅವಧಿಗಳಲ್ಲಿ ಯಾವುದೇ ಹುದ್ದೆಯಲ್ಲಿರಬಹುದು. ಆದರೆ, 3ನೇ ಅವಧಿಗೆ ಮೊದಲು ಮೂರು ವರ್ಷಗಳ ಕಾಲ ಕಡ್ಡಾಯವಾಗಿಕೂಲಿಂಗ್ಆಫ್ಪಿರಿಯಡ್‌’ ದಾಟಬೇಕು.

ಜಯ್ಶಾ ಪ್ರತಿನಿಧಿ ಬಿಸಿಸಿಐ ಕಾರ್ಯದರ್ಶಿ ಜಯ್ಶಾ ಅವರನ್ನು ಐಸಿಸಿಯಲ್ಲಿ ಬಿಸಿಸಿಐನ ಪ್ರತಿನಿಧಿಯನ್ನಾಗಿ ಇದೇ ವೇಳೆ ನೇಮಕ ಮಾಡಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ಶಾ ಅವರ ಪುತ್ರನಾಗಿರುವ ಜಯ್ಶಾ ಇನ್ನು ಮುಂದೆ ಬಿಸಿಸಿಐ ಸಿಇಒ ರಾಹುಲ್ಜೋಹ್ರಿ ಬದಲಿಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: