ಕ್ರೀಡೆಮನರಂಜನೆ

ಇಂದು ನಟಿ ಆಶ್ರಿತಾ ಶೆಟ್ಟಿಯೊಂದಿಗೆ ಗೃಹಸ್ಥಾಶ್ರಮ ಸೇರಲಿರುವ ಕ್ರಿಕೆಟಿಗ ಮನೀಶ್ ಪಾಂಡೆ

ದೇಶ(ನವದೆಹಲಿ)ಡಿ.2:- ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅಂತಿಮ ಪಂದ್ಯವನ್ನು ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಆಡಿದ್ದು,  ಕರ್ನಾಟಕದ ಪರ, ನಾಯಕ ಮನೀಶ್ ಪಾಂಡೆ ನಾಟೌಟ್  ಔಟಾಗದೆ 60 ರನ್ ಗಳಿಸಿದರು. ಅಂತಿಮ ಪಂದ್ಯದಲ್ಲಿ ಕರ್ನಾಟಕ ಒಂದು ರನ್‌ನಿಂದ ತಮಿಳುನಾಡನ್ನು ಸೋಲಿಸಿತು. ಭಾನುವಾರ  ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಚಾಂಪಿಯನ್ ಆಗಿ ಹೊರಬಂದ ನಂತರ ಅಂದರೆ ಇಂದು ಮನೀಶ್ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.

ಮನೀಶ್ ಪಾಂಡೆ ದಕ್ಷಿಣ ಭಾರತದ ನಟಿ ಆಶ್ರಿತಾ ಶೆಟ್ಟಿಯನ್ನು ಮದುವೆಯಾಗಲಿದ್ದಾರೆ. ‘ತೆಲಿಕೆದ ಬೊಳ್ಳಿ’ ತುಳು ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಆಶ್ರಿತಾ ಶೆಟ್ಟಿ ತಮಿಳು ಚಿತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರಶಸ್ತಿ ಪಂದ್ಯವನ್ನು ಗೆದ್ದ ನಂತರ ಮನೀಶ್ ಪಾಂಡೆ ಅವರ ಗೆಲುವಿನ ಸಂಭ್ರಮಾಚರಣೆ  ಇನ್ನೂ ಕೆಲವು ದಿನಗಳವರೆಗೆ ಇರುತ್ತದೆ.  ಇಂದು ಅವರ ವಿವಾಹ ನಡೆಯಲಿದ್ದು,  ವಿವಾಹ ಆಚರಣೆಯು ಎರಡು ದಿನಗಳವರೆಗೆ ನಡೆಯಲಿದೆ.  ವಿವಾಹದಲ್ಲಿ ಎರಡೂ ಕುಟುಂಬಗಳ ಕೆಲವು ನಿಕಟವರ್ತಿಗಳು ಮಾತ್ರ  ಭಾಗವಹಿಸಲಿದ್ದಾರೆ.  ಮದುವೆ ಮುಂಬೈನಲ್ಲಿ ನಡೆಯಲಿದ್ದು, ಮನೀಶ್ ಪಾಂಡೆ ಅವರ ನಿವಾಸ ಬೆಂಗಳೂರಿನಲ್ಲಿದೆ. ಮನೀಶ್ ಪಾಂಡೆ ಭಾರತಕ್ಕಾಗಿ 23 ಏಕದಿನ ಮತ್ತು 32 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: