ಪ್ರಮುಖ ಸುದ್ದಿಮನರಂಜನೆ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್   ಸ್ಥಿತಿ ಸುಧಾರಣೆ :  ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಶಿಫ್ಟ್

ದೇಶ(ಮುಂಬೈ)ಡಿ.2:- ಸ್ವರ ಸಾಮ್ರಾಜ್ಞಿ  ಖ್ಯಾತ ಗಾಯಕಿ  90 ವರ್ಷದ   ಲತಾ ಮಂಗೇಶ್ಕರ್ ಅವರ ಸ್ಥಿತಿ ನಿರಂತರವಾಗಿ ಸುಧಾರಿಸುತ್ತಿದೆ. ಸುಮಾರು 10 ದಿನಗಳ ಹಿಂದೆ ವೆಂಟಿಲೇಟರ್ (ಲೈಫ್ ಸಪೋರ್ಟ್ ಸಿಸ್ಟಮ್) ನಿಂದ ತೆಗೆದ ನಂತರ, ಲತಾ ಮಂಗೇಶ್ಕರ್ ಅವರನ್ನು ಈಗ ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ (ವಿಶೇಷ ಕೊಠಡಿ) ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಗೆ ಸಂಬಂಧಿಸಿದ ವಿಶ್ವಾಸಾರ್ಹ ಮೂಲವು ಸುದ್ದಿ ಮಾಧ್ಯಮವೊಂದಕ್ಕೆ ನೀಡಿದೆ.

ಜನರಲ್ ವಾರ್ಡ್‌ಗೆ ಸ್ಥಳಾಂತರಗೊಂಡಿದ್ದರೂ, ಲತಾ ಮಂಗೇಶ್ಕರ್  ಅವರಿನ್ನೂ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ.  ಅವರ ಚೇತರಿಕೆ ತುಂಬಾ ನಿಧಾನವಾಗಿದ್ದು, ದುರ್ಬಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಇರಿಸಲಾಗಿದೆ.

ಏತನ್ಮಧ್ಯೆ, ಲತಾ ಮಂಗೇಶ್ಕರ್ ಅವರ ಕುಟುಂಬ ಮೂಲವು  ಅವರು ಮೊದಲಿಗಿಂತಲೂ ಉತ್ತಮವಾಗಿದ್ದಾರೆ ಮತ್ತು ಅವರು ಜನರೊಂದಿಗೆ ಸಂವಹನ ನಡೆಸಲು ಸಹ ಸಮರ್ಥರಾಗಿದ್ದಾರೆ ಎಂದು ತಿಳಿಸಿದೆ ಎನ್ನಲಾಗಿದೆ. ಲತಾ ಮಂಗೇಶ್ಕರ್ ಅವರ ಡಿಸ್ಚಾರ್ಜ್  ಕುರಿತುಂತೆ ಆಸ್ಪತ್ರೆ ಮೂಲಗಳು ಪ್ರತಿಕ್ರಿಯಿಸಿದದ್ದ,  ಸಂಪೂರ್ಣವಾಗಿ ಚೇತರಿಸಿಕೊಳ್ಳುವುದನ್ನೇ  ಕಾಯುತ್ತಿದ್ದೇವೆ. ಒಂದೆರಡು ವಾರಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗಬಹುದು ಎಂದು ಹೇಳಿದ್ದಾರೆನ್ನಲಾಗಿದೆ.

ಲತಾ ಮಂಗೇಶ್ಕರ್ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು,  ಅವರನ್ನು ಗಂಭೀರ ಸ್ಥಿತಿಯಲ್ಲಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. (ಎಸ್.ಎಚ್)

Leave a Reply

comments

Related Articles

error: