ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಿದ್ದರಾಮಯ್ಯ ಸಂಪುಟಕ್ಕೆ ಮರಳಿದ ಕೆ.ಜೆ. ಜಾರ್ಜ್‍

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಪುಟದಿಂದ ನಿರ್ಗಮಿಸಿದ್ದ ಕೆ.ಜೆ. ಜಾರ್ಜ್‍ ಅವರು ಮತ್ತೆ ರಾಜ್ಯ ಸಂಪುಟಕ್ಕೆ ಮರಳಿದ್ದಾರೆ. ಸೋಮವಾರ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲ ಅವರು ಪ್ರಮಾಣವಚನ ಬೋಧಿಸಿದರು.  

ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್‍ ಅವರು, ಸಿಐಡಿ ವರದಿಯಲ್ಲಿ ನನ್ನ ಮೇಲಿನ ಆರೋಪಗಳು ನಿರಾಧಾರ ಎಂದು ಕ್ಲೀನ್‍ ಚಿಟ್ ನೀಡಲಾಗಿದೆ. ಆದ್ದರಿಂದ ನಾನು ಕಳಂಕಮುಕ್ತನಾಗಿ ಸಂಪುಟಕ್ಕೆ ವಾಪಸ್ ಬಂದಿದ್ದೇನೆ ಎಂದರು.

ಬೆಂಗಳೂರು ನಗರದ ಸರ್ಜಜ್ಞನಗರ ಕ್ಷೇತ್ರದ ಶಾಸಕರಾಗಿರುವ ಜಾರ್ಜ್ ಅವರು, ರಾಜೀನಾಮೆ ನೀಡುವಾಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿದ್ದರು. ಜಾರ್ಜ್‍ ಅವರಿಗೆ ಮತ್ತೆ ಅದೇ ಖಾತೆ ನೀಡಲಾಗಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಖಾತೆಯನ್ನು ಬೇರೆ ಸಚಿವರಿಗೆ ಹಸ್ತಾಂತರಿಸದೆ ತಾವೇ ನಿರ್ವಹಿಸುತ್ತಿದ್ದರು. ಈಗ ಮರಳಿ ಜಾರ್ಜ್ ಅವರಿಗೇ ನೀಡಲಾಗಿದೆ.

Leave a Reply

comments

Tags

Related Articles

error: