ಮೈಸೂರು

ಮೈಸೂರಿನ ವಿಮಾನ ನಿಲ್ದಾಣಕ್ಕೆ ಶ್ರೀಜಯಚಾಮರಾಜೇಂದ್ರ ಒಡೆಯರ್‍  ಹೆಸರಿಡಲು ಸುಧಾಕರ ಎಸ್ .ಶೆಟ್ಟಿ ಒತ್ತಾಯ

ಮೈಸೂರು,ಡಿ.2:- 1941 ರಿಂದ 1971 ರವರೆಗೂ ನಮ್ಮ ಮೈಸೂರು ರಾಜ್ಯವನ್ನು ರಾಜ ಒಡೆಯರು ಆಳ್ವಿಕೆ ನಡೆಸುತ್ತಿದ್ದರು. ಅದರಲ್ಲೂ ಸ್ವಾತಂತ್ರ್ಯ ಬಂದ ನಂತರವೂ ಜನರ ಸಮಸ್ಯೆಗಳಿಗೆ ತನ್ನನ್ನೇ ತಾನು ಸಮರ್ಪಿಸಿಕೊಂಡ ರಾಜ ಮಹಾರಾಜ ಶ್ರೀ.ಜಯಚಾಮರಾಜೇಂದ್ರ ಒಡೆಯರ್.  ಮೈಸೂರು ಮಹಾರಾಜರು ದಕ್ಷ, ನಿಷ್ಟಾವಂತ, ಜನಾನುರಾಗಿ ಮಹಾರಾಜರಾಗಿ 1941 ರಿಂದ 1947ರವರೆಗೂ ಆಡಳಿತ ನಡೆಸಿದ್ದಾರೆ. ಹಾಗೆಯೇ 1950 ರ ನಂತರ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ‘ರಾಜ ಪ್ರಮುಖ್ ಆಫ್ ಮೈಸೂರು’ ನ್ನು ಕೇಂದ್ರ ಸರ್ಕಾರವು ಅದಕ್ಕೆ ನೀಡಿ, ರಾಜ-ಮಹಾರಾಜರ ಪ್ರಮುಖ ನಿರ್ಧಾರವನ್ನು ರಾಜರ ಸಲಹೆಯಂತೆ ತಿಳಿಯಲಾಗುತ್ತಿತ್ತು.  1956ರ ನಂತರ ಭಾಷಾವಾರು ವಿಂಗಡಣೆಯಾದಾಗ ನಮ್ಮ ರಾಜ್ಯಕ್ಕೆ  ಜಯಚಾಮರಾಜೇಂದ್ರ ಒಡೆಯರ್‍ ಅವರು ರಾಜ್ಯದ ಅಭಿವೃದ್ದಿಗೆ ಸಂಪೂರ್ಣವಾದ ಕಾಣಿಕೆಯನ್ನು ನೀಡಿದ್ದಾರೆ. ಆದ್ದರಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾರಾಜರ ಹೆಸರಿಡುವುದು ಸೂಕ್ತ ಎಂದು ಎಫ್.ಕೆ.ಸಿ.ಸಿ.ಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಅವರು ನಮ್ಮ ಕರ್ನಾಟಕದಲ್ಲಿ ರಾಜ-ಮಹಾರಾಜರ ಕೊಡುಗೆ ಅದ್ವಿತೀಯ. ಅವರು ಸಂಗೀತ, ನಾಟಕ ಅಕಾಡೆಮಿ, ವಿಶ್ವ ಹಿಂದೂ ಪರಿಷತ್ತು, ಇಂಡಿಯನ್ ವೈಲ್ಡ್ ಲೈಫ್ ನಂತಹ ಕೊಡುಗೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಮಹಾರಾಜರು. ಅವರು 4 ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್‍ನ್ನು ಸಹ ಪಡೆದಿದ್ದರು. ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ, ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯಗಳಿಂದಲೂ ಸಹ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು.

ತಮ್ಮ ಆಡಳಿತದ ಅವಧಿಯಲ್ಲಿ ಕಲೆ & ಸಂಸ್ಕೃತಿಯ ತವರೂರನ್ನಾಗಿ ಕರ್ನಾಟಕವನ್ನು ಬಿಂಬಿಸಿದ ಜಯಚಾಮರಾಜೇಂದ್ರ ಒಡೆಯರ್‍ ಅವರು ಮೊದಲನೆಯ ಮಹಾರಾಜ. ಭಾರತವು ಸ್ವಾತಂತ್ರ್ಯಗೊಂಡಾಗ ತನ್ನ ರಾಜ್ಯವನ್ನು ಭಾರತ ಸರ್ಕಾರದೊಂದಿಗೆ ವಿಲೀನಗೊಳಿಸಿದಂತಹ ಮಹಾರಾಜ ಹಾಗೂ 1950-56ರವರೆಗೆ ರಾಜ್ಯಪಾಲರಾಗಿ ರಾಜ್ಯಕ್ಕೆ ರಾಜಕೀಯ ಮಾರ್ಗದರ್ಶನ ನೀಡಿರುವ ಒಬ್ಬ ಮುತ್ಸದ್ದಿ. ಹಾಗೆಯೇ ಕಲೆ, ಸಾಹಿತ್ಯ, ಕ್ರೀಡೆ ಹಾಗೂ ರಾಜಕೀಯ ಈ ಎಲ್ಲಾ ಕ್ಷೇತ್ರಗಳಿಗೂ ಸಮಾನ ಆಸಕ್ತಿ ಹೊಂದಿದಂತಹ ಮಹಾರಾಜರು. ಆದ್ದರಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾರಾಜರ ಹೆಸರಿಡುವುದು ಸೂಕ್ತವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: