ಕ್ರೀಡೆಮೈಸೂರು

ಬಾಲಕರ ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಆರ್ಯನ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಗೆ ಜಯ

ಮೈಸೂರು,ಡಿ.2- ಮೈಸೂರಿನ ಚಾಲೆಂಜರ್ ಅಕಾಡೆಮಿ ಆಯೋಜಿಸಿದ್ದ 18 ವರ್ಷದೊಳಗಿನ ಬಾಲಕರ ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಆರ್ಯನ್ಸ್ ಬಾಸ್ಕೆಟ್ ಬಾಲ್ ಕ್ಲಬ್ ವಿಜೇತರಾಗಿ ಹೊರಹೊಮ್ಮಿತು.

ವಿಶ್ವವಿದ್ಯಾನಿಲಯದ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ವಿಜಯನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಸೋಲಿಸಿ ಆರ್ಯನ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಜಯಗಳಿಸಿದೆ.

ಪಂದ್ಯಾವಳಿಯಲ್ಲಿ ಮೈಸೂರಿನ ಆರು ಬ್ಯಾಸ್ಕೆಟ್‌ಬಾಲ್ ಕ್ಲಬ್‌ಗಳು ಭಾಗವಹಿಸಿದ್ದವು. ಪರಿವರ್ಧನಾ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್ ನ ಡೀನ್ ಆರ್.ಎ.ಚೇತನ್ ರಾಮ್, ಹರಿವಿದ್ಯಾಲಯದ ಕಾರ್ಯದರ್ಶಿ ಎಚ್.ಆರ್.ಭಗವಾನ್, ನಟರಾಜ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪ್ರಸಾದ್ ಮೂರ್ತಿ, ಚಾಲೆಂಜರ್ಸ್ ಅಕಾಡೆಮಿಯ ಕಾರ್ಯದರ್ಶಿ ಎನ್.ಬ್ರಿಜೇಶ್ ಪಟೇಲ್ ಚಿತ್ರದಲ್ಲಿದ್ದಾರೆ. (ಎಂ.ಎನ್)

Leave a Reply

comments

Related Articles

error: