ಪ್ರಮುಖ ಸುದ್ದಿ

ಒಕ್ಕಲಿಗರ ಸಂಘದ ಮಹಾಸಭೆ : ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಸಾಧಕರಿಗೆ ಸನ್ಮಾನ

ರಾಜ್ಯ( ಮಡಿಕೇರಿ) ಡಿ.3 :- ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಪ್ರಸಕ್ತ ಸಾಲಿನ ಮಹಾಸಭೆಯು ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ಬಾಲಭವನದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ 2018ನೇ ಸಾಲಿನ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸೋಮವಾರಪೇಟೆಯ ತೋಳೂರು ಶೆಟ್ಟಳ್ಳಿ ನಿವಾಸಿ ಎಂ.ಇ.ಉದಯ ಕುಮಾರ್ ಅವರ ಪುತ್ರಿ ಎಂ.ಯು.ಶ್ರಾವಣಿ ಅವರಿಗೆ ಮಡಿಕೇರಿಯ ಆರ್.ಆರ್. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಸಿ.ನವೀನ್ ಕುಮಾರ್ ಅವರು ನೀಡಿದ ಹತ್ತು ಸಾವಿರ ರೂ. ನಗದನ್ನು ಹಸ್ತಾಂತರಿಸಿ ಗೌರವಿಸಲಾಯಿತು.
ಶನಿವಾರಸಂತೆಯ ಡಿ.ಕೆ.ಶಂಕರ್ ಅವರ ಪುತ್ರಿ ಡಿ.ಎಸ್.ಧನ್ಯ ಅವರಿಗೆ ಸಂಘದ ವತಿಯಿಂದ ಐದು ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸೋಮವಾರಪೇಟೆಯ ನಿವಾಸಿ ಹೆಚ್.ಕೆ.ಲತೀಶ್ ಅವರ ಪುತ್ರಿ ಎಲ್.ಕಶ್ವಿ ಅವರಿಗೆ ಸಂಘದ ವತಿಯಿಂದ ಎರಡು ಸಾವಿರದ ಐನೂರು ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಹಕಾರ ಸಪ್ತಾಹ ಸಂದರ್ಭ ಕೊಡಗು ಜಿಲ್ಲೆಯ ಶ್ರೇಷ್ಠ ಸಹಕಾರಿ ಎಂಬ ಪ್ರಶಸ್ತಿಗೆ ಭಾಜನರಾದ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಹಿರಿಯರಾದ ಕೆ.ಪಿ.ನಾಗರಾಜ್ ಅವರನ್ನು ಸಂಘದಿಂದ ಅಭಿನಂದಿಸಿ ಗೌರವಿಸಲಾಯಿತು. ಸಂಘದ ಗೌರವ ಕಾರ್ಯದರ್ಶಿ ಪಿ.ಉಮೇಶ್ ಕುಮಾರ್ ಅವರು ಕಳೆದ ಮಹಾಸಭೆಯ ನಡಾವಳಿಯನ್ನು ಓದಿದರು. ಕಳೆದ ಆಡಳಿತ ಮಂಡಳಿಯ ವರದಿಯನ್ನು ಭುವನೇಂದ್ರ ಅವರು ಸಭೆ ಮುಂದೆ ಮಂಡಿಸಿದರು. 2018-19ರ ಆಯವ್ಯಯ ವರದಿಯನ್ನು ಎಸ್.ಎಂ.ಚಂಗಪ್ಪ ಸಭೆ ಮುಂದೆ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು.
ಸಂಘದ ಉಪಾಧ್ಯಕ್ಷರುಗಳಾದ ಬಿ.ಈ. ಶಿವಯ್ಯ, ವಿ.ಪಿ. ಸುರೇಶ್, ವಿ.ಕೆ. ದೇವಲಿಂಗಯ್ಯ, ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಜಿ.ಮೋಹನ್, ವಿರಾಜಪೇಟೆ ತಾಲ್ಲೂಕು ಸಂಘದ ಉಪಾಧ್ಯಕ್ಷ ಕೆ.ಪಿ. ನಾಗರಾಜು, ಸೋಮವಾರಪೇಟೆ ತಾಲ್ಲೂಕು ಸಂಘದ ಅಧ್ಯಕ್ಷರಾದ ಎ.ಆರ್. ಮುತ್ತಣ್ಣ, ಕುಶಾಲನಗರದ ಕಾವೇರಿ ತಾಲ್ಲೂಕು ಒಕ್ಕಲಿಗ ಸಂಘ, ಅಧ್ಯಕ್ಷ ಎಂ.ಕೆ. ದಿನೇಶ್, ಸಂಘದ ನಿರ್ದೇಶಕರುಗಳಾದ ಭುವನೇಂದ್ರ, ಕೆ.ಕೆ. ಮಂಜುನಾಥ್, ಪುರುಷೋತ್ತಮ್, ಬಿ.ಡಿ. ಪುಟ್ಟರಾಜ್, ಎಸ್.ಎಲ್. ಬಸವರಾಜ್, ದೀಪಕ್, ಶಿವಕುಮಾರಿ, ಯಶೋಧ ಕುಶಾಲಪ್ಪ, ಜಾನಕಿ ವೆಂಕಟೇಶ್, ಗೋಪಾಲಕೃಷ್ಣ, ವಿಜಯ ಚಂದ್ರಶೇಖರ್, ಮೋಹನ್ ಕುಮಾರ್, ಎಂ. ಆರ್. ಗೋಪಿನಾಥ್, ವಿ.ಎಲ್.ಸುರೇಶ್, ಜಿ.ಬಿ.ಸೋಮಯ್ಯ, ಟಿ. ಎಲ್. ಮಹೇಶ್ ಕುಮಾರ್, ಎ.ಪಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ತಾಕೇರಿ ಪೊನ್ನಪ್ಪ, ಎಚ್.ಕೆ. ಮಾದಪ್ಪ, ತಾಲೂಕು ಪ್ರತಿನಿಧಿ ಡಿ.ಬಿ.ಸತೀಶ್ ಸಭೆಯಲ್ಲಿ ಹಾಜರಿದ್ದು, ಸಂಘದ ಬಲವರ್ಧನೆಗೆ ಸಲಹೆಗಳನ್ನು ನೀಡಿದರು.
ಎಂ.ಪಿ.ಕೃಷ್ಣರಾಜು ಅವರು ನಿರೂಪಿಸಿ, ಜಾನಕಿ ವೆಂಕಟೇಶ್ ಪ್ರಾರ್ಥಿಸಿದರು. ಕೆ.ಪಿ.ನಾಗರಾಜ್ ಸ್ವಾಗತಿಸಿ, ತಾಕೇರಿ ಪೊನ್ನಪ್ಪ ವಂದಿಸಿದರು. ಪ್ರತಿಭಾ ಪುರಸ್ಕಾರ ನೀಡಿದ ಡಾ.ಬಿ.ಸಿ.ನವೀನ್ ಕುಮಾರ್ ಅವರ ಕೊಡುಗೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯಿತು. ಮೃತಪಟ್ಟ ಸಂಘದ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: