ಮೈಸೂರು

 ಯುವಕನನ್ನು ಅಪಹರಿಸಿ ರೂ.50 ಸಾವಿರ ನಗದು ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಕಿಡ್ನಾಪರ್ ಗಳ ಬಂಧನ : ಯುವಕನ ರಕ್ಷಣೆ  

ಮೈಸೂರು,ಡಿ.2:-  01/12/2019 ರಂದು ಮೈಸೂರು ನಗರ ಆಲನಹಳ್ಳಿ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಓರ್ವ ಯುವಕನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ  ಮೂವರು ವ್ಯಕ್ತಿಗಳನ್ನು ಬಂಧಿಸಿ ಯುವಕನನ್ನು ರಕ್ಷಿಸಿದ್ದಾರೆ.

ಬಂಧಿತರನ್ನು ಮಂಜುನಾಥ @ ಮಂಜು ಬಿನ್ ಮಹದೇವ,( 29), ನಾಡನಹಳ್ಳಿ, ಮೈಸೂರು. ನವೀನ್ ಬಿನ್ ರಾಜು, (32), ಸುಬ್ರಹ್ಮಣೇಶ್ವರ ನಗರ, 3ನೇ ಹಂತ, ಹೆಬ್ಬಾಳ್  ಮೈಸೂರು, ನಾಗರಾಜು @ ಕೋತಿನಾಗ ಬಿನ್ ಲೇಠ್ ಸಿದ್ದಲಿಂಗು (25), ನಾಡನಹಳ್ಳಿ,  ಎಂದು ಗುರುತಿಸಲಾಗಿದ್ದು,  ಇವರನ್ನು  ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ   01.12.2019 ರಂದು ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವೇಗೌಡ ಸರ್ಕಲ್ ಬಳಿಯಿಂದ ಯಶವಂತ (21) ಎಂಬವನನ್ನು ಅಪಹರಿಸಿ, ಈತನ ಅಣ್ಣ ಮನು ಎಂಬುವನ ಬಳಿ  50,000ರೂ.ನಗದು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು, ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಾಗೂ ಅಪಹರಣವಾಗಿದ್ದ ಯುವಕನನ್ನು ನಾಡನಹಳ್ಳಿಯ ಕನಕ ಭವನದ ಬಳಿ ವಶಕ್ಕೆ ಪಡೆದಿದ್ದಾರೆ.  ಈ ಪ್ರಕರಣವು ದಾಖಲಾದ ಒಂದು ಘಂಟೆಯ ಒಳಗೆ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಆಲನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಈ ಕಾರ್ಯಾಚರಣೆಯನ್ನು ಮೈಸೂರು ನಗರದ ಡಿ.ಸಿ.ಪಿ  ಮುತ್ತುರಾಜು.ಎಂ  ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ   ಎಂ.ಎನ್ ಶಶಿಧರ   ನೇತೃತ್ವದಲ್ಲಿ ಆಲನಹಳ್ಳಿ ಪೊಲೀಸ್ ಇನ್ಸಪೆಕ್ಟರ್ ಹರಿಯಪ್ಪ.ಹೆಚ್, ಎಎಸ್‍ಐ ಶ್ರೀಧರ್. ಹೆಚ್.ಕೆ, ಸಿಬ್ಬಂದಿಯವರಾದ ಚೌಡಪ್ಪ, ಶಿವಪ್ರಸಾದ್, ಮಾಣಿಕ್   ಮಾಡಿರುತ್ತಾರೆ.  (ಎಸ್.ಎಚ್)

Leave a Reply

comments

Related Articles

error: