ಮೈಸೂರು

ನಷ್ಟದ ಹಿನ್ನೆಲೆ : ವ್ಯಕ್ತಿ ನೇಣಿಗೆ ಶರಣು

ವ್ಯಾಪಾರದಲ್ಲಿ  ನಷ್ಟವುಂಟಾದ ಹಿನ್ನೆಲೆಯಲ್ಲಿ ಮನನೊಂದು  ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವನನ್ನು  ಮಂಡಿಮೊಹಲ್ಲಾ ನಿವಾಸಿ ಪ್ರಕಾಶ್(40) ಎಂದು ಗುರುತಿಸಲಾಗಿದೆ. ಈತ ಮೈಸೂರು-ತಿ.ನರಸೀಪುರ ರಸ್ತೆಯಲ್ಲಿನ  ಆಲನಹಳ್ಳಿ ಬಡಾವಣೆಯಲ್ಲಿ ಪ್ರಕಾಶ್ ಇಲೆಕ್ಟ್ರಿಕಲ್ಸ್ ಮಳಿಗೆಯನ್ನು ನಡೆಸುತ್ತಿದ್ದ ಎನ್ನಲಾಗಿದೆ. ಆದರೆ ಕೆಲವು ದಿನಗಳಿಂದ ವ್ಯಾಪಾರದಲ್ಲಿ ನಷ್ಟವುಂಟಾಗಿದೆ ಎಂದು ಬೇಸರದಲ್ಲಿದ್ದ ಎಂದು ತಿಳಿದು ಬಂದಿದೆ. ಶುಕ್ರವಾರ ತನ್ನ ಮಳಿಗೆಯ ಹಿಂದುಗಡೆ ಇರುವ ಜಾಗದಲ್ಲಿ ನೇಣಿಗೆ ಶರಣಾಗಿದ್ದಾನೆ. ಅಂಗಡಿ ತೆರೆದಿಟ್ಟು ಹೊರಹೋದಾತ ಬಹಳ ಸಮಯವಾದರೂ ಹಿಂದಿರುಗಿ ಬಾರದ ಹಿನ್ನೆಲೆಯಲ್ಲಿ   ಅಕ್ಕಪಕ್ಕದವರು ಬಂದು ನೋಡಲಾಗಿ ಆತ ನೇಣಿಗೆ ಶರಣಾಗಿರುವುದು ಕಂಡು ಬಂತು.

ಸ್ಥಳಕ್ಕೆ ಆಲನಹಳ್ಳಿ ಠಾಣೆಯ ಇನ್ಸಪೆಕ್ಟರ್ ಶೇಖರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: