ಮೈಸೂರು

ಸತತ ಪರಿಶ್ರಮ, ಪ್ರಯತ್ನ ಹಾಗೂ ಸಾಧಿಸುವ ಛಲವನ್ನು ಜೀವನದಲ್ಲಿ ಬೆಳೆಸಿಕೊಂಡರೆ ಕನಸುಗಳನ್ನು ನನಸು ಮಾಡಿಕೊಳ್ಳಬಹುದು : ಡಾ.ವಿ. ಭಾಗ್ಯಲಕ್ಷ್ಮಿ

ಮೈಸೂರು,ಡಿ.3:-  ಸತತ ಪರಿಶ್ರಮ, ಪ್ರಯತ್ನ ಹಾಗೂ ಸಾಧಿಸುವ ಛಲವನ್ನು ನಮ್ಮ ಜೀವನದಲ್ಲಿ ಬೆಳೆಸಿಕೊಂಡರೆ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಎಂದು ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ಡಾ.ವಿ. ಭಾಗ್ಯಲಕ್ಷ್ಮಿ ಹೇಳಿದರು.

ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಿನ್ನೆ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪಿ.ಸಿ. ಮತ್ತು ಪಿಎಸ್‍ಐ ಪರೀಕ್ಷಾ ಉಚಿತ ತರಬೇತಿ ಶಿಬಿರದ ಅಧ್ಯಯನ ಪುಸ್ತಕ ಬಿಡುಗಡೆ ಹಾಗೂ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರು ಮತ್ತು ಗುರಿ ಇರಬೇಕು. ಒಂದು ವೇಳೆ ಗುರು ಪರಂಪರೆ ಇಲ್ಲದೇ ಹೋದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಗುರುಗಳು ತೋರಿಸಿದ ಮಾರ್ಗದಲ್ಲಿ ನಡೆಯುವ ಮೂಲಕ ಉತ್ತಮ ಬದುಕು ಕಟ್ಟಿ ಕೊಳ್ಳಬೇಕು. ಇದರ ಜೊತೆಗೆ ಸತತ ಶ್ರಮ, ಪ್ರಯತ್ನ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇಂದು ಕೆಪಿಎಸ್ಸಿ ಹಾಗೂ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಡಾಕ್ಟರ್, ಎಂಜಿನಿಯರಿಂಗ್ ಓದಿದ ಮಂದಿಯೇ ಹೆಚ್ಚು ಬರುತ್ತಿದ್ದಾರೆ. ಆದರೆ ಕಲಾ ನಿಕಾಯ ಓದಿದವರು ಕಡಿಮೆ. ಇಂಗ್ಲೀಚ್ ಭಾಷೆ ಎಂದು ಯಾರೂ ಹೆದರುವ ಅಗತ್ಯವಿಲ್ಲ. ಶ್ರದ್ಧೆ ಇದ್ದರೆ ಅದನ್ನೂ ಕಲಿಯಬಹುದು. ಸಮಾಜದ ಹೊಣೆಗಾರಿಕೆ ಹಾಗೂ ನಿಮ್ಮ ಜವಾಬ್ದಾರಿ ಅರಿತು ಕಾರ್ಯಪ್ರವೃತ್ತರಾಗಿ ಎಂದರು.

ನಿವೃತ್ತ ಪೊಲೀಸ್ ಉಪ ಆಯುಕ್ತ ಬಿ.ಪಿ. ಸುರೇಶ್ ಮಾತನಾಡಿ, ಪೊಲೀಸ್ ಕೆಲಸ ನೊಬೆಲ್ ಕೆಲಸವಿದ್ದಂತೆ. ಶಿಸ್ತು, ಸಂಯದಿಂದ ಕೂಡಿದ ಸಮಾಜ ಸೇವೆ ಮಾಡುವ ಕೆಲಸ. ಈ ಕೆಲಸಕ್ಕೆ ಬರಲು ಯಾವ ಲಂಚವನ್ನೂ ನೀಡಬೇಕಿಲ್ಲ. ನಿಮ್ಮಲ್ಲಿ ಪರೀಕ್ಷೆ ಎದುರಿಸುವ ಸಾಮರ್ಥ್ಯ ಹಾಗೂ ದೈಹಿಕ ಸದೃಢತೆ ಮುಖ್ಯವಾಗಿರುತ್ತದೆ ಅಷ್ಟೇ. ಒಂದೆರೆಡು ಸೋಲುಗಳಿಗೆ ಹತಾಶರಾಗದೇ ಮತ್ತೆ ಪ್ರಯತ್ನ ಮಾಡಬೇಕು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಜೆ.ಬಿ. ರಂಗಸ್ವಾಮಿ, ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ,ಪ್ರೊ. ಲ.ನಾಸ್ವಾಮಿ, ಪ್ರೊ. ಮಹದೇವಸ್ವಾಮಿ, ಕೆ.ವೈನಾಗೇಂದ್ರ, ಸಿಪಿಐ ಆನಂದ್, ಸಿಪಿಐ ರವಿಶಂಕರ್ ಪ್ರೊ. ಹೊನ್ನಯ್ಯ,ಪ್ರೊ. ಕೃ.ಪ.ಗಣೇಶ, ಪ್ರೊ. ಸಿ.ಕೆ. ಕಿರಣ್ಕೌಶಿಕ್, ರೋಹನ್ ರವಿಕುಮಾರ್, ರಾಜೀವ   ಡಾ. ಎಸ್ ಬಿಎಂ. ಪ್ರಸನ್ನ, ಕಾರ್ಯದರ್ಶಿ ಬಾಲಕೃಷ್ಣ, ಜ್ಞಾನಬುತ್ತಿ ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣ ಗೌಡ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: