ಪ್ರಮುಖ ಸುದ್ದಿವಿದೇಶ

ಅಮೆರಿಕದಲ್ಲಿ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

ವಾಷಿಂಗ್ಟನ್,ಡಿ.3- ಥ್ಯಾಂಕ್ಸ್ ಗಿವಿಂಗ್ ನೈಟ್ ಪಾರ್ಟಿ (ಕೃತಜ್ಞತೆಯ ರಾತ್ರಿ) ಮುಗಿಸಿ ಮನೆಗೆ ತೆರಳುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಅಮೆರಿಕದ ಟೆನ್ನೆಸೀಯಲ್ಲಿ ನಡೆದಿದೆ.

ಜ್ಯೂಡಿ ಸ್ಟ್ಯಾನ್ಲಿ (23) ಮತ್ತು ವೈಭವ್ ಗೋಪಿಶೆಟ್ಟಿ (26) ಮೃತಪಟ್ಟ ಭಾರತಿಯ ವಿದ್ಯಾರ್ಥಿಗಳು. ಇವರು ಅಮೆರಿಕದ ಟೆನ್ನೆಸೀ ಸ್ಟೇಟ್ ಯುನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದು, ಕೃಷಿ ವಿಜ್ಞಾನ ಕಾಲೇಜಿನಲ್ಲಿ ಆಹಾರ ವಿಜ್ಞಾನ ಪದವಿ ಪಡೆಯುತ್ತಿದ್ದರು.

ಪೊಲೀಸ್ ಮೂಲಗಳು ತಿಳಿಸಿರುವಂತೆ ಟೆನ್ನಿಸಿಯ ಸೌಥ್ ನ್ಯಾಷ್ ವಿಲ್ಲೆಯಲ್ಲಿ ಕಳೆದ ನವೆಂಬರ್ 28ರಂದು ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇಬ್ಬರೂ ಅಂದು ರಾತ್ರಿ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ವಾಪಸ್ ಆಗುತ್ತಿದ್ದರು. ವೇಳೆ ಟ್ರಕ್ ವೊಂದು ಇವರಬ್ಬರ ಮೇಲೆ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಸ್ಟಾಂಡ್ ಗೆ ನೆಡೆದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಟ್ರಕ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದು, ಬಂಧಿತನನ್ನು 26 ವರ್ಷದ ಡೇವಿಡ್ ಟಾರ್ಸ್ ಎಂದು ಗುರುತಿಸಿದ್ದಾರೆ. ಅಪಘಾತದ ಬಳಿಕ ಈತ ಪೊಲೀಸರಿಗೆ ಶರಣಾಗಿದ್ದು, ಪೊಲೀಸರ ಯಾವುದೇ ಪ್ರಶ್ನೆಗೂ ಆತ ಈವರೆಗೂ ಉತ್ತರಿಸಿಲ್ಲ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೌಥ್ ನ್ಯಾಷ್ ವಿಲ್ಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಸಂತ್ರಸ್ಥರ ಪೊಷಕರಿಗೆ ಮೃತದೇಹಗಳನ್ನು ರವಾನಿಸು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಟೆನ್ನೆಸ್ಸೀ ವಿವಿ ಕುಟುಂಬವು ಕೃತಜ್ಞತೆಯ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರು ಭಾರತದ ವಿದ್ಯಾರ್ಥಿಗಳಾಗಿದ್ದರು. ಸ್ಟ್ಯಾನ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರೆ ಗೋಪಿಸೆಟ್ಟಿ ಡಾಕ್ಟರೇಟ್ ಮಾಡುತ್ತಿದ್ದರು ಎಂದು ವಿವಿಯ ಅಧಿಕೃತ ಪ್ರಕಟಣೆ ಹೇಳಿದೆ. (ಎಂ.ಎನ್)

Leave a Reply

comments

Related Articles

error: