ಕ್ರೀಡೆಮೈಸೂರು

ರೆಡ್ ಕಪ್ -2017 ಪಡೆದ ಎನ್.ಆರ್.ಸಮೂಹ

ಸೈಕಲ್ ಫ್ಯೂರ್ ಅಗರಬತ್ತೀಸ್ ಮೈಸೂರು ಮೂಲದ ಎನ್‍ಆರ್ ಸಮೂಹವು ರೆಡ್ ಕಪ್ 2017 ವಿಜೇತರಾಗಿ ಹೊರಹೊಮ್ಮಿದೆ. ರೆಡ್ ಕಪ್ ಪಂದ್ಯಾವಳಿಯ, ಕಾರ್ಪೋರೇಟ್ ಟೆನಿಸ್ ಬಾಲ್ ಪ್ಲಡ್ ಲೈಟ್ ಕ್ರಿಕೆಟ್ ಟೂರ್ನಮೆಂಟನ್ನು ಸೂಪರ್ ಹಿಟ್ಸ್ 93.5 ರೆಡ್ ಎಫ್‍ಎಂ ಗ್ರೂಪ್ ವತಿಯಿಂದ ಆಯೋಜಿಸಲಾಗಿತ್ತು.

ಮೂರು ದಿನಗಳ ಕಾಲ ಮೈಸೂರಿನ ಮಹಾರಾಜಾ ಕಾಲೇಜಿನ ಆವರಣದಲ್ಲಿ ಕಾರ್ಪೋರೇಟ್ ಸಂಸ್ಥೆಗಳಿಗಾಗಿಯೇ ಏರ್ಪಡಿಸಲಾಗಿದ್ದ ರೆಡ್ ಕಪ್ ಪಂದ್ಯದಲ್ಲಿ ಬೇರೆ ಬೇರೆ ವಲಯಗಳ ತಂಡಗಳು ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದ್ದವು.

ಈ ಯಶಸ್ವಿ ಪಂದ್ಯಾವಳಿಯಲ್ಲಿ ಸುಮಾರು 24 ಕಾರ್ಪೋರೇಟ್ ತಂಡಗಳು ಭಾಗವಹಿಸಿದ್ದವು. ಎನ್‍ಆರ್ ಸಮೂಹ, ಆರ್.ಬಿ.ಐ, ವಿಪ್ರೋ, ಎಕ್ಸೆಲ್ ಸಾಫ್ಟ್, ಎಚ್.ಯು.ಎಲ್, ಎಸ್.ಪಿ.ಐ., ಬಿ.ಎ.ಆರ್.ಸಿ., ಮೆಟ್ರೊ ಕಾರ್ಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ  ಭಾಗವಹಿಸಿದ್ದವು. ಎನ್.ಆರ್. ಸಮೂಹದ ವ್ಯವಸ್ಥಾಪಕ ಪಾಲುದಾರ ಅರ್ಜುನ್ ರಂಗ ಮಾತನಾಡಿ ಪರಸ್ಪರ ಭೇಟಿಯಾಗಲು ಮತ್ತು ಕೂಡಿ ಆಡಲು ಕಾರ್ಪೊರೇಟ್ ವಲಯದ ನೌಕರರಿಗೆ ಇದೊಂದು ಅದ್ಭುತ ಅವಕಾಶವಾಗಿದೆ. ಕಾರ್ಪೊರೇಟ್‍ನಂತಹ ಧಾವಂತದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನೌಕರರಲ್ಲಿ ಹೊಸ ಚೈತನ್ಯ ತುಂಬಲು ಇಂತಹ ಉಪಕ್ರಮಗಳ ಅಗತ್ಯವಿರುತ್ತದೆ ಎಂದರು.

ಅಂತಿಮ ಪಂದ್ಯವು ಎನ್.ಆರ್. ಸಮೂಹ ಮತ್ತು ಮೆಟ್ರೊ ಕಾರ್ಸ್ ನಡುವೆ ನಡೆಯಿತು. ಎನ್.ಆರ್. ಸಮೂಹವು 9 ವಿಕೆಟ್‍ಗಳನ್ನು ಪಡೆಯುವ ಮೂಲಕ ವಿಜೇತ ತಂಡವಾಗಿ ಹೊರಹೊಮ್ಮಿತು. ಎನ್.ಆರ್. ಸಮೂಹದ ಮಧುಸೂದನ್ ಮ್ಯಾನ್ ಆಫ್ ದಿ ಸಿರೀಜ್ ಪ್ರಶಸ್ತಿಗೆ ಭಾಜನರಾದರು.

Leave a Reply

comments

Related Articles

error: