ಮನರಂಜನೆ

ಅದ್ಧೂರಿಯಾಗಿ ನೆರವೇರಿದ ಆಯ್ರಾಳ ಬರ್ತ್ ಡೇ: ಸ್ಯಾಂಡಲ್ ವುಡ್ ಗಣ್ಯರ ದಂಡು  

ಬೆಂಗಳೂರು,ಡಿ.3-ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದಾದ ಮಗಳು ಆಯ್ರಾಳ ಮೊದಲ ವರ್ಷದ ಹುಟ್ಟುಹಬ್ಬ ಸಂಭ್ರಮ, ಸಡಗರ ಹಾಗೂ ಅದ್ಧೂರಿಯಾಗಿ ನೆರವೇರಿದೆ.

ಬೆಂಗಳೂರಿನ ಫನ್ ವರ್ಲ್ಡ್ ನಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಯಲ್ಲಿ ಇಡೀ ಸ್ಯಾಂಡಲ್ ವುಡ್ ಹಾಜರಿತ್ತು. ಯಶ್ ಹಾಗೂ ರಾಧಿಕಾ ಕುಟುಂಬ ಸದಸ್ಯರು, ಆತ್ಮೀಯರು ಆಗಮಿಸಿ ಆಯ್ರಾಗೆ ಶುಭಹಾರೈಸಿದರು.

ಆಯ್ರಾ ಜನ್ಮದಿನಕ್ಕಾಗಿ ಫನ್ ವರ್ಲ್ಡ್ ನಲ್ಲಿ ನಿನ್ನೆ ವಂಡರ್ ಲ್ಯಾಂಡ್ ಕ್ರಿಯೇಟ್ ಮಾಡಲಾಗಿತ್ತು. ‘ಕ್ಯಾಂಡಿ ಲ್ಯಾಂಡ್’ ಥೀಮ್ ನಲ್ಲಿ ಬರ್ತ್ ಡೇ ಯನ್ನು ಸೆಲೆಬ್ರೇಷನ್ ಮಾಡಲಾಯಿತು. ಫನ್ ವರ್ಲ್ಡ್ ನಲ್ಲಿ ತಲೆಯೆತ್ತಿದ್ದ ‘ಕ್ಯಾಂಡಿ ಲ್ಯಾಂಡ್’ಗೆ ಆಯ್ರಾ ಪ್ರಿನ್ಸೆಸ್ ಆಗಿದ್ದಳು. ಶಿಮ್ಮರಿಂಗ್ ಫ್ರಾಕ್ ನಲ್ಲಿ ಆಯ್ರಾ ‘ಸಿಂಡ್ರೆಲ್ಲಾ’ ಆಗಿ ಕ್ಯೂಟ್ ಆಗಿ ಕಾಣುತ್ತಿದ್ದಳು.

ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಬೃಹತ್ ಕೇಕ್ ಸಿದ್ಧಪಡಿಸಲಾಗಿತ್ತು. ‘ಕರೂಸೆಲ್ ರೈಡ್’ (Carousel ride) ಥೀಮ್ ನಲ್ಲಿ ರೆಡಿಯಾಗಿದ್ದ ಎಂಟು ಅಂತಸ್ತುಗಳ ಕೇಕ್ ಅನ್ನು ಕಟ್ ಮಾಡಿ ಆಯ್ರಾ ಬರ್ತ್ ಡೇ ಆಚರಿಸಲಾಯಿತು. ಫನ್ ವರ್ಲ್ಡ್ ನಲ್ಲಿ ಮೆರ್ರಿ ಗೋ ರೌಂಡ್ ಕರೂಸೆಲ್ ರೈಡ್ (ಕುದುರೆ ಸವಾರಿ) ಇದೆ. ಇದರ ಮುಂದೆಯೇ, ಅದೇ ರೀತಿಯ ಕೇಕ್ ಕಟ್ ಮಾಡಿ ಆಯ್ರಾ ಫಸ್ಟ್ ಬರ್ತಡೇ ಸೆಲೆಬ್ರೇಟ್ ಮಾಡಲಾಯಿತು.

ಮಗಳ ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೆರ್ರಿ ಗೋ ರೌಂಡ್ ಕರೂಸೆಲ್ ರೈಡ್ ನ ಯಶ್ ಎಂಜಾಯ್ ಮಾಡಿದರು. ಚಿಕ್ಕ ಮಕ್ಕಳಂತೆ ನಟ ಯಶ್, ರಾಧಿಕಾ ಪಂಡಿತ್ ಕುದುರೆ ಸವಾರಿ ಮಾಡಿದರು. ಇದನ್ನು ನೋಡಿ ಅಲ್ಲಿದ್ದವರು ಸಂತಸ ಪಟ್ಟರು.

ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್, ನಟಿ, ಸಂಸದೆ ಸುಮಲತಾ ಅಂಬರೀಶ್, ನಟಿ ಭಾರತಿ, ಜಯಂತಿ, ವಿಜಯಲಕ್ಷ್ಮೀ ಸಿಂಗ್, ಅಭಿಷೇಕ್ ಅಂಬರೀಶ್, ರವಿಚಂದ್ರನ್ ಕುಟುಂಬ, ನಟ ಅನಿರುದ್ಧ್, ಕೀರ್ತಿ ಅನಿರುದ್ಧ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ, ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ, ಹಂಸಲೇಖ ದಂಪತಿ, ಅಜಯ್ ರಾವ್ ದಂಪತಿ, ರಿಷಭ್ ಶೆಟ್ಟಿ ದಂಪತಿ, ರಾಮ್ ಕುಮಾರ್ ಕುಟುಂಬ, ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರು ಕುಟುಂಬ, ಜಯಣ್ಣ ಭೋಗೇಂದ್ರ ಕುಟುಂಬಅವಿನಾಶ್ ಕುಟುಂಬನಟ ಪ್ರೇಮ್, ರಕ್ಷಿತ್ ಶೆಟ್ಟಿ, ವಿಜಯ ರಾಘವೇಂದ್ರ, ಶ್ರೀ ಮುರಳಿ, ಶರಣ್, ರಿಷಿ, ಅರುಣ್ ಸಾಗರ್, ತರುಣ್ ಸುಧೀರ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ದೇಶಕ, ಕೊರಿಯೋಗ್ರಾಫರ್ ಹರ್ಷ, ವಿ.ಹರಿಕೃಷ್ಣ, ಡಾಲಿ ಧನಂಜಯ, ನಟಿ ಅಮೂಲ್ಯ, ಕೆ.ಮಂಜು, ಅನೀಲ್, ಯೋಗಿ ಜಿ.ರಾಜ್, ಭುವನ್ ಗೌಡ, ಗರುಡ ರಾಮ್, ಗುರುಕಿರಣ್, ಗಾಯಕ ವಿಜಯ್ ಪ್ರಕಾಶ್, ನಿರ್ಮಾಪಕ ಶೋಭೋ ಯರ್ಲಗಡ್ಡ, ಬಾಲಿವುಡ್‌ನ ನಿರ್ಮಾಪಕ ವಿತರಕ ಅನಿಲ್ ತಡಾನಿ, ಸೇರಿದಂತೆ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ವಿತರಕರು, ಸಂಗೀತ ನಿರ್ದೇಶಕರು, ಗಾಯಕರು ಒಟ್ಟಾರೆಯಾಗಿ ಇಡೀ ಸ್ಯಾಂಡಲ್ ವುಡ್ ಹಾಗೂ ಉದ್ಯಮಿ ಅಶೋಕ್ ಖೇಣಿ ಸೇರಿದಂತೆ ಅನೇಕರು ಆಗಮಿಸಿ ಆಯ್ರಾಗೆ ವಿಶ್ ಮಾಡಿದರು.

ಆಯ್ರಾಳಿಗೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ವಿಶೇಷವಾಗಿ ಶುಭ ಕೋರಿದ್ದರು. ರಾಧಿಕಾ ಪಂಡಿತ್, `ನನ್ನ ಹೃದಯ ಹಾಗೂ ಆತ್ಮದ ಒಂದು ಭಾಗ ನೀನು. ನನ್ನ ದೇವತೆ ನಿನಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಶುಭ ಕೋರಿದ್ದರು.

ಯಶ್, ‘ಅಪ್ಪ ಎಂದು ಬಡ್ತಿ ನೀಡಿದ ನೀನು ನನ್ನ ಮನದಲ್ಲಿನ ಮೃದುತ್ವವನ್ನು ಹೊರತೆಗೆದೆ. ನನ್ನ ಶಕ್ತಿಯೂ ನೀನೇ, ನನ್ನ ದೌರ್ಬಲ್ಯವೂ ನೀನೇ, ನನ್ನಗೆ ಎಲ್ಲವೂ ನೀನೇ. ಹ್ಯಾಪಿ ಬರ್ತಡೇ ನನ್ನ ಡಾರ್ಲಿಂಗ್’ ಎಂದು ಮಗಳೊಂದಿಗಿನ  ಫೋಟೋ ಹಂಚಿಕೊಂಡು ವಿಶ್ ಮಾಡಿದ್ದರು.

2018 ಡಿಸೆಂಬರ್ 2 ರಂದು ಆಯ್ರಾಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದರು. ಕಳೆದ ತಿಂಗಳು ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. (ಎಂ.ಎನ್)

Leave a Reply

comments

Related Articles

error: