ಮೈಸೂರು

ಭಾರತೀಯ ಸಂಸ್ಕೃತಿಗೆ ಮಾರುಹೋದ ವಿದೇಶಿ ಜೋಡಿ : ಹಿಂದೂ ಸಂಪ್ರದಾಯದಂತೆ ನಿಶ್ಚಿತಾರ್ಥ

ಇಂದಿನ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರಿಹೋಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಆದರೆ ಭಾರತೀಯ ಸಂಸ್ಕೃತಿ ಚೆನ್ನಾಗಿದೆ ಎಂದು ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಅನುಕರಿಸುತ್ತಿದ್ದಾರೆ. ಅಮೇರಿಕ ಯುವಕ-ಜರ್ಮನಿ ಯುವತಿ ಪರಸ್ಪರ ಮೆಚ್ಚಿ ಕೈ ಹಿಡಿಯಲಿದ್ದು, ಭಾರತೀಯ ಸಂಸ್ಕೃತಿಗೆ ಮಾರುಹೋದ ವಿದೇಶಿಪ್ರಣಯಪಕ್ಷಿಗಳು  ಹಿಂದೂ ಧರ್ಮದ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪ್ರೀತಿಗೆ ಯಾವ ಹಂಗಿಲ್ಲ. ಅದು ಜಾತಿ, ಧರ್ಮ, ದೇಶ, ಭಾಷೆಯನ್ನೂ ಮೀರಿ ಬೆಳೆದು ನಿಂತಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ದೂರದ ಅಮೇರಿಕ-ಜರ್ಮನಿ ಎಲ್ಲಿ, ಮೈಸೂರೆಲ್ಲಿ. ಅದರಲ್ಲೂ ಹಿಂದೂ ಪರಂಪರೆಯ ವೇದಾಧ್ಯಯನವೆಲ್ಲಿ. ಅಮೇರಿಕ ಮತ್ತು ಜರ್ಮನಿಯ ಯುವಕ ಯುವತಿ ಭಾರತಕ್ಕೆ ಬಂದು ವೇದಾಧ್ಯಯನ ನಡೆಸಿದ್ದಾರೆ. ಇಬ್ಬರಲ್ಲಿಯೂ ಪ್ರೀತಿ ಅಂಕುರಿಸಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹಿಂದೂ ಧರ್ಮದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಸಂದರ್ಭ ಅವರ ಕೆಲವು ಸ್ನೇಹಿತರು ಮತ್ತು ಮಾಜಿ ಸಚಿವ ಎಸ್.ಎ.ರಾಮದಾಸ್ ಸಾಕ್ಷಿಯಾದರು.

ಯುವಕ ಬಿಳಿಯ ಬಣ್ಣದ ಮೈಸೂರು ರೇಷ್ಮೆ ಪಂಚೆಯಲ್ಲಿ, ಯುವತಿ ಬಂಗಾರಬಣ್ಣದ ಜರತಾರಿ ಸೀರೆಯಲ್ಲಿ ಕಂಗೊಳಿಸಿದರು. ಒಟ್ಟಿನಲ್ಲಿ ದೂರದ ಭಾರತಕ್ಕೆ ಬಂದು ನಿಶ್ಚಿತಾರ್ಥವನ್ನು ಮಾಡಿಕೊಂಡರು.

Leave a Reply

comments

Related Articles

error: