
ಪ್ರಮುಖ ಸುದ್ದಿ
ಮನುಷ್ಯನಿಂದಲೇ ಪ್ರಾಣಿಗಳಿಗೆ ತೊಂದರೆ ಯಾಗುತ್ತಿದೆ : ಪರಿಸರ ಪ್ರೇಮಿ ಸ್ನೇಕ್ ಶ್ಯಾಂ ವಿಷಾದ
ರಾಜ್ಯ(ಮಂಡ್ಯ)ಡಿ.3:- ಸೈಂಟ್ ಮೀರಾಸ್ ಇನ್ ಕ್ಯೂಸಿವ್ ಕಾನ್ವೆಂಟ್ ಸುಜ್ಜಲೂರು ವತಿಯಿಂದ 10 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಳವಳ್ಳಿ ತಾಲೂಕಿನ ಸುಜ್ಜಲೂರು ಗ್ರಾಮದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ. ಎ.ಟಿ ಶಿವರಾಂ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಮಕ್ಕಳನ್ನು ಅತಿಯಾಗಿ ಮುದ್ದಿಸಬೇಡಿ. ಇದರಿಂದ ಮಕ್ಕಳಲ್ಲಿ ಸೋಮಾರಿತನ ಬರುತ್ತದೆ. ಶಾಲೆಗೆ ಕಳುಹಿಸಿದರೆ ಸಾಲದು. ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಪೋಷಕರು ಗಮನಿಸಬೇಕು ಎಂದರು.
ಮಕ್ಕಳಯನ್ನು ಉತ್ತಮ ಪ್ರಜೆಯನ್ನಾಗಿ ಮಾಡಬೇಕಾದರೆ ಪರಿಪೂರ್ಣವಾದ ಸಂಸ್ಕಾರದ ಜೊತೆ ಉತ್ತಮ ವಿದ್ಯಾಭ್ಯಾಸ ನೀಡಿದಾಗ ಮಾತ್ರ ಸಾಧ್ಯ ಎಂದರು.
ವನ್ಯಜೀವಿ ಸಂರಕ್ಷಕ ಹಾಗೂ ಪರಿಸರ ಪ್ರೇಮಿ ಸ್ನೇಕ್ ಶ್ಯಾಂ ಮಾತನಾಡಿ ಪ್ರಾಣಿಗಳನ್ನು ರಕ್ಷಣೆ ಮಾಡಿ, ಪ್ರಾಣಿಗಳಿಂದ ಮನುಷ್ಯನಿಗೆ ಯಾವ ರೀತಿ ತೊಂದರೆಯಾಗುವುದಿಲ್ಲ, ಆದರೆ ಮನುಷ್ಯನಿಂದಲೇ ಪ್ರಾಣಿಗಳಿಗೆ ತೊಂದರೆ ಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳು ಡ್ಯಾನ್ಸ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡುವ ಮೂಲಕ ರಂಜಿಸಿದರು.
ಇದೇ ವೇಳೆ ಸೈಂಟ್ ಮೀರಾಸ್ ಇನ್ ಕ್ಲೂಸಿವ್ ಕಾನ್ವೆಂಟ್ ಮಕ್ಕಳು ಸಿದ್ದಪಡಿಸಿರುವ ವಸ್ತುಗಳ ಪ್ರದರ್ಶನ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕಾನ್ವೆಂಟ್ ಮುಖ್ಯಸ್ಥ ಚಂದ್ರಶೇಖರ್, ಕಾನ್ವೆಂಟ್ ಪ್ರಾಂಶುಪಾಲರಾದ ಡಾ.ಬಿ.ಕೆ. ಕಲಾವತಿ, ಅಸಿಕ್ ಸಿ ಶೇಖರ್, ಮುಖ್ಯಶಿಕ್ಷಕಿ ಶೃತಿ ಸೇರಿದಂತೆ ಮತ್ತಿತರರು ಇದ್ದರು. (ಕೆ.ಎಸ್,ಎಸ್.ಎಚ್)