ಪ್ರಮುಖ ಸುದ್ದಿ

ಸಮ್ಮಿಶ್ರ ಸರ್ಕಾರವನ್ನು ಬೀಳಿಸುವುದರಲ್ಲಿ ನಮ್ಮ ಸಣ್ಣ ಪಾತ್ರ ಇತ್ತು : ಬಿಜೆಪಿ ಹಿರಿಯ ಮುಖಂಡ ಎಸ್‌.ಎಂ. ಕೃಷ್ಣ ಹೇಳಿಕೆ

ರಾಜ್ಯ(ಬೆಂಗಳೂರು),ಡಿ.3:- ಸಮ್ಮಿಶ್ರ ಸರ್ಕಾರವನ್ನು ಬೀಳಿಸುವುದರಲ್ಲಿ ನಮ್ಮ ಸಣ್ಣ ಪಾತ್ರ ಇತ್ತು  ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಸಿಎಂ ಎಸ್‌ಎಂ ಕೃಷ್ಣ ಹೇಳಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ, ಸಮ್ಮಿಶ್ರ ಸರ್ಕಾರ ಬೀಳಿಸಲು ನಮ್ಮ ಪಾತ್ರವೂ ಇದೆ. ಈಗಲೂ ನಾನು ಅದನ್ನೇ ಹೇಳುತ್ತೇನೆ. ಅಂದು ಯೋಗಕ್ಷೇಮ ವಿಚಾರಿಸಲು ಹಲವರು ಬರುತ್ತಿದ್ದರು. ಆ ವೇಳೆ ಸಮ್ಮಿಶ್ರ ಸರ್ಕಾರದ ಯೋಗಕ್ಷೇಮ ವಿಚಾರಿಸುತ್ತಿದ್ದೆ. ಆ ಸರ್ಕಾರ ದಿಕ್ಕುದೆಸೆ ಇಲ್ಲದ ಸರ್ಕಾರವಾಗಿತ್ತು. ಅನರ್ಹ ಶಾಸಕರು ರಾಜ್ಯಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ಅವರು ಈ ಪರಿಸ್ಥಿತಿ ತರದೇ ಹೋಗಿದ್ದರೇ 14 ತಿಂಗಳ ದಿಕ್ಕುದೆಸೆ ಇಲ್ಲದ ಸರ್ಕಾರವನ್ನು ಇನ್ನು 14 ತಿಂಗಳುಗಳ ಕಾಲ ನೋಡಬೇಕಾಗಿತ್ತು ಎಂದು ಹೇಳಿದರು.

ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಪೂರ್ಣಗೊಳಿಸುತ್ತದೆ

 

ನಾನೂ ಕೂಡಾ ಬೇರೆ ಸಂಸ್ಕೃತಿಯಲ್ಲಿ ಬೆಳೆದು ಬಂದವನು, ನಾನು ಈಗ ಬಿಜೆಪಿಯಲ್ಲಿ ಯಾವ ಒಡನಾಟ ಇಟ್ಟುಕೊಂಡಿದ್ದೇನೋ ಅದೇ ರೀತಿ ಗೆದ್ದು ಬರುವ ಶಾಸಕರು ಪಕ್ಷದಲ್ಲಿ ಒಡನಾಟ ಇಟ್ಟುಕೊಳ್ಳುತ್ತಾರೆ. ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಪೂರ್ಣಗೊಳಿಸುತ್ತದೆ. ಮಹಾರಾಷ್ಟ್ರದ ಸ್ಥಿತಿ ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲ. ಇಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ ಎಂದು ಮಾಜಿ ಸಿಎಂ ಎಸ್,ಎಂ ಕೃಷ್ಣ ನುಡಿದರು.

ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಸ್.ಎಂ ಕೃಷ್ಣ, ಮರು ಮೈತ್ರಿಯ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಾಟಕವಾಡುತ್ತಿವೆ. ವಿಪಕ್ಷದಲ್ಲಿರುವವರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಿದ್ದಾರೆ. ಕೆಲವರಿಗೆ ಮಧ್ಯಂತರ ಚುನಾವಣೆ ಬೇಕು. ಸರ್ಕಾರ  ಬೀಳಿಸುವ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಅವರಿಗೆ ಶಕ್ತಿ ಬೇಕಲ್ವಾ ? ನಮ್ಮ ಸರ್ಕಾರ ದೃಢವಾಗಿರುತ್ತದೆ  ಎಂದು  ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: