ದೇಶಪ್ರಮುಖ ಸುದ್ದಿ

ಅಧಿಕಾರಿ ವಿರುದ್ಧ ಆರೋಪ ಮಾಡಿದ್ದ ಯೋಧ ನಿಗೂಢ ಸಾವು

ಕೊಲ್ಲಂ: ಕೇರಳದ ಕರುವೆಲಿಲ್‍ನ ಸೇನಾ ಅಧಿಕಾರಿಯೊಬ್ಬರು ಗುರುವಾರ ಮಹಾರಾಷ್ಟ್ರದ ನಾಸಿಕ್‍ನಲ್ಲಿರುವ ಕ್ಯಾಂಪ್‍ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕಿರುಕುಳ ಆರೋಪ ಮಾಡಿದ್ದ ಅಧಿಕಾರಿ ನಿಗೂಢವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಾಸಿಕ್‍ನ 214ನೇ ಆರ್‍.ಕೆ.ಟಿ ರೆಜಿಮೆಂಟ್‍ನಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ 33 ವರ್ಷದ ಯೋಧ ರೋಯ್ ಮ್ಯಾಥ್ಯೂ ಕಳೆದ ಫೆ.25ರಿಂದ ನಾಪತ್ತೆಯಾಗಿದ್ದ. ಗುರುವಾದ ರೋಯ್ ಮ್ಯಾಥ್ಯೂ ಅವರ ಶವ ಪತ್ತೆಯಾಗಿರುವುದಾಗಿ ರೆಜಿಮೆಂಟ್‍ನ ಕಮಾಂಡಿಂಗ್ ಅಧಿಕಾರಿ ಥಳಿಸಿದ್ದರಿಂದ ಈ ಸಾವು ಸಂಭವಿಸಿದೆ ಎಂದು  ಯೋಧನ ಕುಟುಂಬ ಆರೋಪಿಸಿದೆ.

ಆದರೆ ರೋಯ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಯೋಧನ ಕುಟುಂಬದವರು ಒತ್ತಾಯಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ ಎಂದು ರೋಯ್ ಸಹೋದರ ಜಾನ್ ಅವರು ಹೇಳಿದ್ದಾರೆ.

ಕಳೆದ 12 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರೋಯ್, ನಾಸಿಕ್ ಶಿಬಿರದಲ್ಲಿ ಹಿರಿಯ ಅಧಿಕಾರಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದರು. ಇದಾದ ನಂತರ ಸೋಮವಾರ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ತನ್ನ ಪತ್ನಿಗೆ ಕರೆ ಮಾಡಿ ತಾನು ದೊಡ್ಡ ತಪ್ಪು ಮಾಡಿದ್ದಾಗಿ ತಿಳಿಸಿದ್ದಾರೆ. ಕರೆ ಬಂದ ಮರುದಿನ ಅವರು ನಾಪತ್ತೆಯಾಗಿದ್ದರು ಎಂದು ರಾಯ್ ಅವರ ಕುಟುಂಬ ಆರೋಪಿಸಿದೆ.

Leave a Reply

comments

Related Articles

error: