ಮನರಂಜನೆ

ಅಭಿಮಾನಿಯ ಕಾಲಿಡಿದುಕೊಂಡ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ,ಡಿ.3-ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂಬ ಲಕ್ಷಾಂತರ ಅಭಿಮಾನಿಗಳಿದ್ದಾರೆ.

ಆದರೆ ರಜನಿಕಾಂತ್ ಅವರನ್ನು ಭೇಟಿಯಾದ ಅಭಿಮಾನಿಯೊಬ್ಬರ ಕಾಲನ್ನು ರಜನಿ ಹಿಡಿದುಕೊಂಡಿದ್ದಾರೆ. ಆ ಫೋಟೋ ಈಗ ಸಖತ್ ವೈರಲ್ ಆಗಿದೆ.

ಕೇರಳದಲ್ಲಿನ ಪಗಘಾಟ್ಮೂಲದ ಪ್ರಣವ್, ರಜನಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಜನಿ, ಪ್ರಣವ್ ಅವರ ಕಾಲು ಹಿಡಿದುಕೊಂಡಿದ್ದಾರೆ. ಏಕೆಂದರೆ ಪ್ರಣವ್ ಗೆ ಎರಡೂ ಕೈಗಳಿಲ್ಲ. ಇವರಿಗೆ ಕೈಗಳು ಇಲ್ಲದಿರುವ ಕಾರಣ ಕಾಲಿನಲ್ಲೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಅಭಿಮಾನಿಗೆ ಷೇಕ್ ಹ್ಯಾಂಡ್ ನೀಡಲು ರಜನಿ ಅವರ ಕಾಲು ಹಿಡಿದುಕೊಂಡಿದ್ದಾರೆ.

ಪ್ರಣವ್ ತಲೈವಾರನ್ನು ಭೇಟಿಯಾಗಬೇಕು ಎಂದು ತುಂಬಾ ಸಮಯದಿಂದ ಕನಸು ಕಾಣುತ್ತಿದ್ದರು. ಸಂಗತಿ ತಿಳಿದ ರಜನಿಕಾಂತ್ ಸ್ವತಃ ಪ್ರಣವ್ ಅವರನ್ನು ಪೊಯೆಸ್ ಗಾರ್ಡನ್ನಲ್ಲಿನ ತನ್ನ ಮನೆಗೆ ಆಹ್ವಾನಿಸಿದರು.

ಕೇರಳದಿಂದ ಚೈನ್ನೈಗೆ ಆಗಮಿಸಲು ಪ್ರಣವ್ ಕುಟುಂಬಕ್ಕೆ ರಜನಿಕಾಂತ್ ಟಿಕೆಟ್ ಬುಕ್ ಮಾಡಿಸಿದ್ದರು. ಪ್ರಣವ್ ಅದ್ಭುತ ಕಲಾವಿದ. ತನ್ನ ಕಾಲಿನಿಂದ ರಜನಿಕಾಂತ್ ಚಿತ್ರವನ್ನು ಬಿಡಿಸಿ ಅದನ್ನು ತಲೈವಾಗೆ ಉಡುಗೊರೆಯಾಗಿ ನೀಡಿದ್ದಾರೆ.

ಪ್ರಣವ್ ಬಿಡಿಸಿದ ಚಿತ್ರಗಳ ಮುಖಾಂತರ ಬರುವ ಹಣವನ್ನು ಕೇರಳ ಸರ್ಕಾರಕ್ಕೆ ನಿಧಿಯಾಗಿ ನೀಡಿದ್ದಾರೆ. ಕಳೆದ ವರ್ಷ ಕೇರಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತತ್ತರಿಸಿದ್ದು ಗೊತ್ತೇ ಇದೆ. ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಣವ್ ಸಹಾಯ ಮಾಡಿದ್ದಾರೆ.

ಪರಿಹಾರ ನಿಧಿ ನೀಡುವಾಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಸೆಲ್ಫಿ ತೆಗೆಸಿಕೊಂಡಿದ್ದರು. ಅಂದಿನಿಂದ ಪ್ರಣವ್ ಹೆಸರು ಮಾಧ್ಯಮಗಳಲ್ಲಿ ಮಾರ್ದನಿಸುತ್ತಿದೆ. ಇದಕ್ಕೂ ಮುನ್ನ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ರನ್ನೂ ಪ್ರಣವ್ ಭೇಟಿ ಮಾಡಿ ಸೆಲ್ಫಿ ತೆಗೆಸಿಕೊಂಡಿದ್ದರು. (ಎಂ.ಎನ್)

Leave a Reply

comments

Related Articles

error: