ಮೈಸೂರು

ಉತ್ತಮ ಸಮಾಜಕ್ಕಾಗಿ ಉತ್ತಮ ನಡತೆ ಜಾಗೃತಿ ಜಾಥಾಕ್ಕೆ ಚಾಲನೆ

ಉತ್ತಮ ಸಮಾಜಕ್ಕಾಗಿ ಉತ್ತಮ ನಡತೆ ಧ್ಯೇಯ ವಾಕ್ಯದಡಿ ಶನಿವಾರ ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್ ಮಕ್ಕಳಿಗಾಗಿ ಪರಿವರ್ತನ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ವಿಜಯನಗರ 2ನೇ ಹಂತದ ಸ್ನೇಕ್ ಶ್ಯಾಂ ರಸ್ತೆಯ ಬಳಿ ಪರಿವರ್ತನ್ ಜಾಥಾಕ್ಕೆ ವಿಜಯನಗರ ಠಾಣೆಯ ಎಎಸ್ಸೈ ರಾಜ್ ಗೋಪಾಲ್ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಅದರಿಂದ ಎಳವೆಯಲ್ಲಿಯೇ ಮಕ್ಕಳಿಗೆ ಉತ್ತಮ ನಡತೆಯನ್ನು ಕಲಿಸಬೇಕು ಎಂದರು. ಉತ್ತಮ ಸಮಾಜವನ್ನು ನಿರ್ಮಿಸುವುದು ದೇಶದ ಭಾವೀ ಪ್ರಜೆಯ ಕರ್ತವ್ಯವಾಗಿರುವುದರಿಂದ ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ಸನ್ನಡತೆಯನ್ನು ಕಲಿಯುವುದು ಮುಖ್ಯ. ಮಕ್ಕಳಿಂದಲೇ ಇಂಥಹ ಜಾಗೃತಿ ಜಾಥಾಗಳನ್ನು ನಡೆಸಿ  ನೈತಿಕ ಮೌಲ್ಯಗಳ  ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಜಾಥಾದಲ್ಲಿ ವಿದ್ಯಾರ್ಥಿಗಳು ಬದುಕು ಬದುಕಲು ಬಿಡಿ, ಒಳ್ಳೆಯ ನಡತೆ ಮತ್ತು ಒಳ್ಳೆಯ ನೀತಿಗಳು ಅತ್ಯಮೂಲ್ಯ  ಸ್ನೇಹಿತರು ಮತ್ತು ಗಾಢ ಸಂಬಂಧಗಳು, ಸಂತೋಷವನ್ನು ಮತ್ತೊಬ್ಬರಲ್ಲಿ ಹಂಚಿಕೊಂಡರೆ ಅದು ಇಮ್ಮಡಿಯಾಗಲಿದೆ. ಮಾನವನ ವರ್ತನೆಯಲ್ಲಿ ಅತ್ಯಂತ ಪರಿಣಾಮಕಾರಿ ಗುಣವೆಂದರೆ ಕರುಣೆ ಎಂಬಿತ್ಯಾದಿ  ಬರಹಗಳಿರುವ ಫಲಕಗಳನ್ನು ಹೊತ್ತು, ಘೋಷಣೆಗಳನ್ನು  ಕೂಗುತ್ತಾ  ಪ್ರಮುಖ ಬೀದಿಗಳಲ್ಲಿ ಸಾಗಿ ಬಂದರು.

ಜಾಥಾದಲ್ಲಿ ಶಾಲೆಯ ಪ್ರಾಂಶುಪಾಲ ಕೃಷ್ಣ ಬಂಗೇರ, ಎಲ್ಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳ ಪಾಲಕರು, ಪೋಷಕರು ಪಾಲ್ಗೊಂಡಿದ್ದರು.

 

Leave a Reply

comments

Related Articles

error: