ಪ್ರಮುಖ ಸುದ್ದಿ

ಪಿಎಮ್ ಸಿ ಬ್ಯಾಂಕ್ ಹಗರಣ : ಮೂವರು ನಿರ್ದೇಶಕರ ಬಂಧನ

ದೇಶ( ನವದೆಹಲಿ)ಡಿ.4:-  ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮಂಗಳವಾರ  4,355 ಕೋಟಿ ರೂ.ಗಳ ಹಗರಣದ ತನಿಖೆಗಾಗಿ  ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಮ್ ಸಿ) ಬ್ಯಾಂಕಿನ ಮೂವರು ನಿರ್ದೇಶಕರನ್ನು ಬಂಧಿಸಿದೆ. ಆ ಮೂಲಕ ಈಗ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆಯನ್ನು 12 ಕ್ಕೆ ತಲುಪಿದೆ.

ಹೌಸಿಂಗ್ ಡೆವಲಪ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಮತ್ತು ಅದರ ಸಮೂಹ ಕಂಪನಿಗಳಿಗೆ ಬ್ಯಾಂಕ್ ಒದಗಿಸಿರುವ ಸಾಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ವ್ಯಾಪಕವಾದ ವಿಚಾರಣೆಯ ನಂತರ ಜಗದೀಶ್ ಮುಖೆ, ಮುಕ್ತಿ ಬವಿಸಿ ಮತ್ತು ತೃಪ್ತಿ ಬಾನೆ ಅವರನ್ನು ಬಂಧಿಸಲಾಗಿದೆ ಎಂದು ಇಒಡಬ್ಲ್ಯೂ ಅಧಿಕಾರಿ  ತಿಳಿಸಿದ್ದಾರೆ.

ಜಗದೀಶ್ ಮುಖೆ 2005 ರಿಂದ ಬ್ಯಾಂಕಿನ ನಿರ್ದೇಶಕರಾಗಿದ್ದರು ಮತ್ತು ಅದರ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರಾಗಿದ್ದರು, ಆದರೆ ಬವಿಸಿ 2011 ರಿಂದ ಅದರ ಸಾಲ ಮತ್ತು ಮುಂಗಡ ಸಮಿತಿಯ ನಿರ್ದೇಶಕರಾಗಿದ್ದರು ಮತ್ತು ಸದಸ್ಯರಾಗಿದ್ದರು ಎಂದು ಅವರು ಹೇಳಿದ್ದು,  ತೃಪ್ತಿ ಬಾನೆ ಅವರು 2010 ರಿಂದ 2015 ರ ನಡುವಿನ ಅವಧಿಯಲ್ಲಿ ಸಾಲ ಮರುಪಡೆಯುವಿಕೆ ಸಮಿತಿಯ ಸದಸ್ಯರಾಗಿದ್ದರು ಮತ್ತು 2015 ರಿಂದ ಸಾಲ ಮತ್ತು ಮುಂಗಡ ಸಮಿತಿಯ ಸದಸ್ಯರಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.ಈ ಮೂವರನ್ನು  ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. (ಎಸ್.ಎಚ್)

Leave a Reply

comments

Related Articles

error: