ಮೈಸೂರು

ಕಲಬುರ್ಗಿಯ ವಿಮಾನ ನಿಲ್ದಾಣ ಉದ್ಘಾಟನೆಯ ನೆಪದಲ್ಲಿ ಸಂತ ಶ್ರೀ ಸೇವಾಲಾಲ್ ದೇವಸ್ಥಾನ ಧ್ವಂಸ ವಿರೋಧಿಸಿ ಪ್ರತಿಭಟನೆ

ಮೈಸೂರು,ಡಿ.4:- ಕಲಬುರ್ಗಿಯ ವಿಮಾನ ನಿಲ್ದಾಣ ಉದ್ಘಾಟನೆಯ ನೆಪದಲ್ಲಿ ಮಾದಿಹಾಳ್ ತಾಂಡಾದಲ್ಲಿನ ಸಂತ ಶ್ರೀ ಸೇವಾಲಾಲ್ ದೇವಸ್ಥಾನ ಧ್ವಂಸ ವಿರೋಧಿಸಿ ಬಂಜಾರ ಸೇವಾ ಸಂಘ ಮೈಸೂರು ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಕಲಬುರ್ಗಿಯ ವಿಮಾನ ನಿಲ್ದಾಣ ಉದ್ಘಾಟನೆಯ ನೆಪದಲ್ಲಿ ಮಾದಿಹಾಳ್ ತಾಂಡಾದಲ್ಲಿನ ಸಂತ ಶ್ರೀ ಸೇವಾಲಾಲ್ ಮತ್ತು ಶ್ರೀಮರಿಯಮ್ಮ ದೇವಿಯವರ  ದೇವಸ್ಥಾನ ಧ್ವಂಸಗೊಳಿಸಿ ಶಾಂತಿಪ್ರಿಯ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಕಲಬುರ್ಗಿಯಲ್ಲಿ ಮಾದಿಹಾಲ್ ತಾಂಡಾದಲ್ಲಿನ ಶ್ರೀಸೇವಾಲಾಲ್ ಮತ್ತು ಶ್ರೀ ಮರಿಯಮ್ಮದೇವಿಯವರ ಮಂದಿರವನ್ನು ಪುನರ್ ನಿರ್ಮಿಸಬೇಕು. ಕಲಬುರ್ಗಿ ಜಿಲ್ಲೆಯ ಮಾದಿಹಾಳ್ ತಾಂಡಾದಲ್ಲಿದ್ದ ಶ್ರೀಸೇವಾಲಾಲ್ ದೇವಸ್ಥಾನ ಧ್ವಂಸ ಮಾಡಲು ಆದೇಶಿಸಿದ ಅಧಿಕಾರಿಗಳು, ಕುಮ್ಮಕ್ಕು ನೀಡಿದವರು, ಧ್ವಂಸ ಮಾಡಿದವರ ವಿರುದ್ಧ ಪೊಲೀಸರು ಸ್ವಯಂ  ದೂರು ದಾಖಲಿಸಿಕೊಳ್ಳಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಲಂಬಾಣಿ ಸಮುದಾಯದ ಕೃಷಿ ಭೂಮಿ ಕಿತ್ತುಕೊಂಡು ಸ್ಥಾಪಿಸಲಾದ ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಶ್ರೀ ಸೇವಾಲಾಲ್ ವಿಮಾನ ನಿಲ್ದಾಣವೆಂದು ಹೆಸರಿಡಬೇಕು. ಕಲ್ಬುರ್ಗಿ ವಿಮಾನ ನಿಲ್ದಾಣ ನಿರ್ಮಿಸಲು ಬಂಜಾರರು ಕೃಷಿ ಭೂಮಿ ಕಳೆದುಕೊಂಡಿದ್ದಾರೆ. ಹಾಗಾಗಿ ಭೂಮಿ ಕಳೆದುಕೊಂಡಿರುವ ಲಂಬಾಣಿಗರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರೊ.ಚಂದ್ರಶೇಖರ್ ಆರ್.ನಾಯಕ್, ಅನಿಲ್ ಎಂ, ಹೇಮಂತ್ ಕುಮಾರ್, ತೇಜಾ ನಾಯ್ಕ್, ಅನಿಲ್ ನಾಯ್ಕ, ಆರ್ ಬಿಐ ಚಂದ್ರ ನಾಯ್ಕ್, ರಮೇಶ್ ನಾಯ್ಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: