Uncategorized

ಮನೀಶ್ ಪಾಂಡೆ ರಿಸೆಪ್ಷನ್​ನಲ್ಲಿ ಯುವಿ ಭರ್ಜರಿ ಡ್ಯಾನ್ಸ್: ವಿಡಿಯೋ ವೈರಲ್

ಮುಂಬೈ,ಡಿ.4-ಟೀಂ ಇಂಡಿಯಾದ ಆಟಗಾರ ಮನೀಶ್ ಪಾಂಡೆ, ನಟಿ ಆಶ್ರಿತಾ ಶೆಟ್ಟಿ ಅವರೊಂದಿಗೆ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಮುಂಬೈನ ದಿ ಲೀಲಾ ಹೊಟೇಲ್​ನಲ್ಲಿ ಅದ್ಧೂರಿ ರಿಸೆಪ್ಷನ್ ನೆರವೇರಿದೆ.

ರಿಸೆಪ್ಷನ್​ನಲ್ಲಿ ಕೆಲ ಮಾಜಿ ಹಾಗೂ ಹಾಲಿ ಆಟಗಾರರು ಭಾಗವಹಿಸಿ ನೂತನ ಜೋಡಿಗೆ ಶುಭಹಾರೈಸಿದ್ದಾರೆ. ಈ ವೇಳೆ ಯುವರಾಜ್ ಸಿಂಗ್ ಎಲ್ಲರೊಂದಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದು ರಿಸೆಪ್ಷನ್​ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಪಾಂಡೆ ಜೊತೆ ಯುವಿ ಭರ್ಜರಿ ಸ್ಟೆಪ್ ಗಳನ್ನು ಹಾಕಿದ್ದಾರೆ. ಯುವಿ ಎಂಜಾಯ್ ಮಾಡಿಕೊಂಡು ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮದುವೆಯ ಬಳಿಕ ಒಂದು ದಿನವೂ ವಿಶ್ರಾಂತಿ ಇಲ್ಲದೆ ಬ್ಯುಸಿಯಾಗಿರುವ ಪಾಂಡೆ, ಇಂದು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ.

ಮನೀಶ್ ಪಾಂಡೆ 23 ಅಂತರಾಷ್ಟ್ರೀಯ ಏಕದಿನ ಹಾಗೂ 32 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕ ಬಾರಿಸಿರುವ ಪಾಂಡೆ ದೇಶೀಯ ಕ್ರಿಕೆಟ್​ನಲ್ಲಿ ರನ್​ ಮಳೆಯೇ ಸುರಿಸಿದ್ದಾರೆ.

ಆಶ್ರಿತಾ ಶೆಟ್ಟಿ, ತುಳು, ತಮಿಳು ಭಾಷೆಯಲ್ಲಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತುಳುವಿನ ತೆಲಿಕೆದ ಬೊಳ್ಳಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿದ್ಧಾರ್ಥ್ ನಟನೆಯ ಉದಯಂ ಎನ್​ಹೆಚ್​​4, ಒರು ಕನ್ನಿಯುಂ ಮೂನು ಕಲಾವನಿಕಳುಂ, ಇಂದ್ರಜಿತ್ ಹಾಗೂ ನಾನ್​ ದಾನ್​​ ಶಿವ ಚಿತ್ರಗಳಲ್ಲಿ ನಟಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: