ಮೈಸೂರು

ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ತೆರಳಿದ ಅಧಿಕಾರಿಗಳು

ಮೈಸೂರು,ಡಿ.5:-  ನಿನ್ನೆ  ಮಧ್ಯಾಹ್ನವೇ  ಚುನಾವಣಾ ಸಾಮಗ್ರಿಗಳೊಂದಿಗೆ ಹುಣಸೂರು ಉಪ ಚುನಾವಣೆಯ ಕರ್ತವ್ಯಕ್ಕೆ ಆಗಮಿಸಿರುವ ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು.

ಬೆಳಗ್ಗೆಯಿಂದಲೇ ನಾನಾ ತಾಲೂಕುಗಳಿಂದ ಆಗಮಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಚುನಾವಣಾಧಿಕಾರಿ ಎಸ್‌.ಪೂವಿತಾ, ಸಹಾಯಕ ಚುನಾವಣಾಧಿಕಾರಿ ಬಸವರಾಜ್‌ ಅವರು ಕರ್ತವ್ಯದ ಬಗ್ಗೆ ಮಾರ್ಗದರ್ಶನ ನೀಡಿದರು. ನಂತರ ಎಲ್ಲ ದಾಖಲೆಗಳನ್ನು ಪಡೆದು  ಸಾಮಗ್ರಿಗಳನ್ನು ಕೊಂಡೊಯ್ದರು.

ಮತಗಟ್ಟೆ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ಮುಂಜಾನೆಯೇ  ಆಗಮಿಸಿದ್ದು, ಸಿಬ್ಬಂದಿಗೆ ಚುನಾವಣಾ ಶಾಖೆ ವತಿಯಿಂದ ಬೆಳಗಿನ ಉಪಹಾರಕ್ಕೆ ಬಿಸಿ ಬೇಳೆಬಾತ್‌, ಮಧ್ಯಾಹ್ನ ಟೊಮೆಟೊ ಬಾತ್‌, ಮೊಸರನ್ನ ಜತೆಗೆ ಮೈಸೂರ್‌ ಪಾಕ್‌ ನೀಡಲಾಗಿತ್ತು.  ಪೊಲೀಸ್‌ ಇಲಾಖೆ   ತಮ್ಮ ಸಿಬ್ಬಂದಿಗಳಿಗೆ ಟೊಮೆಟೊ ಬಾತ್‌, ಮಧ್ಯಾಹ್ನ ಅನ್ನ ಸಾಂಬರ್‌, ತಿಳಿ ಸಾರು, ಹಪ್ಪಳ, ಪಾಯಸ, ಬಾಳೆ ಹಣ್ಣು ನೀಡಿದೆ.  ಗುಣಮಟ್ಟದ ಊಟ-ತಿಂಡಿ ಬಗ್ಗೆ ಕರ್ತವ್ಯಕ್ಕಾಗಮಿಸಿದ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಸಿಲಿನ ಝಳಕ್ಕೆ ಸಿಬ್ಬಂದಿಗೆ ತೊಂದರೆಯಾಗದಂತೆ ಮೈದಾನದಲ್ಲಿದೊಡ್ಡ ಶಾಮಿಯಾನ ಹಾಕಲಾಗಿತ್ತು. ಸಿಬ್ಬಂದಿ ಊಟದ ನಂತರ ವಾಹನಗಳಲ್ಲಿನಿಯೋಜನೆ ಮಾಡಿರುವ ಮತಗಟ್ಟೆಗಳಿಗೆ ತೆರಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: