ಮೈಸೂರು

ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಜೆ.ಎಸ್.ಎಸ್. ಕಾಲೇಜು ದ್ವಿತೀಯ

ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ  ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ದ್ವಿತೀಯ ಬಿ.ಎಸ್ಸಿ (ಸಿಬಿಜಡ್) ವಿದ್ಯಾರ್ಥಿಗಳಾದ ಎನ್.ಎಂ. ಪ್ರತಾಪ್ ಮತ್ತು ಕೆ.ಎಸ್. ರಜತ್  ಹೈದರಾಬಾದ್‍ನ ಎಂ.ಎಲ್.ಆರ್. ತಾಂತ್ರಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ದ “ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನ”ದಲ್ಲಿ ಪಾಲ್ಗೊಂಡಿದ್ದರು.

ರಾಷ್ಟ್ರಾದ್ಯಂತ ಸುಮಾರು 300ಕ್ಕೂ ಹೆಚ್ಚು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮೂರು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಜೆ.ಎಸ್.ಎಸ್.ಕಾಲೇಜು ಕೂಡಾ ಒಂದಾಗಿದ್ದು  ಟೆಲಿಗ್ರಾಫಿ ಇನ್ ಬಾರ್ಡರ್ ಸೆಕ್ಯುರಿಟಿ ಎಂಬ ವಿಷಯದ ಬಗ್ಗೆ ವಸ್ತುಪ್ರದರ್ಶನ ನೀಡಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

ಈ ಬಹುಮಾನ  60,000 ರೂಪಾಯಿ ಬೆಲೆಬಾಳುವ ಲ್ಯಾಪ್‍ಟಾಪ್ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ಈ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಮಾದರಿಯು ಮೇಕ್ ಇನ್ ಇಂಡಿಯಾಗೆ  ಆಯ್ಕೆಯಾಗಿದೆ.

ಬಹುಮಾನಿತ ವಿದ್ಯಾರ್ಥಿಗಳನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರು, ಪ್ರಾಂಶುಪಾಲರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Leave a Reply

comments

Related Articles

error: