ಮೈಸೂರು

ಐಸಿಟಿಸಿಯ ಆಪ್ತ ಸಮಾಲೋಚಕರಿಗೆ ಸನ್ಮಾನ

ಮೈಸೂರು,ಡಿ.5-ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಉತ್ತಮ ಸೇವಾ ಕೇಂದ್ರಗಳನ್ನು ಗುರುತಿಸಿ ಅಲ್ಲಿನ ಕಾರ್ಯ ವೈಖರಿ ಹಾಗೂ ಸೇವಾ ಮನೋಭಾವವನ್ನು ಪರಿಗಣಿಸಿ 2019-20ರ ಸಾಲಿನ ಆಪ್ತ ಸಮಾಲೋಚಕರಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಜಿಲ್ಲಾ ಹಿರಿಯ ಸಿವಿಲ್ ನಾಯ್ಯಾಧೀಶರಾದ ಬಿ.ಪಿ.ದೇವಮಾನೆ ಅವರು ಕೆಆರ್ ಆಸ್ಪತ್ರೆ ಐಸಿಟಿಸಿಯ ಆಪ್ತ ಸಮಾಲೋಚಕರಾದ ಎಸ್.ಗೋಪಾಲ್ ಮತ್ತು ಆರ್.ಸರೋಜಮ್ಮ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮೈಸೂರು ವಿಭಾಗೀಯ ಸಹ ನಿರ್ದೇಶಕಿ ಡಾ.ಬಿ.ಎಸ್.ಪುಷ್ಪಲತಾ ಇತರರು ಉಪಸ್ಥಿತರಿದ್ದರು. (ಎಂ.ಎನ್)

 

Leave a Reply

comments

Related Articles

error: