ಮೈಸೂರು

ಮತದಾನದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಪೊಲೀಸರಿಗೆ ಧಿಕ್ಕಾರ ಘೋಷಣೆ : ಮಾತಿನ ಚಕಮಕಿ ; ಲಾಠಿ ಪ್ರಹಾರ

ಮೈಸೂರು, ಡಿ.5:- ಹುಣಸೂರು ಉಪಚುನಾವಣೆಯ ಮತದಾನದ ವೇಳೆ  ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರಿಗೆ ಧಿಕ್ಕಾರ ಕೂಗಿದ ಘಟನೆ ನಡೆದಿದೆ.

ಹುಣಸೂರಿನ ಕರಿಗೌಡನ ಬೀದಿ ಮತಕೇಂದ್ರದ ಬಳಿ ಮತಕೇಂದ್ರದಿಂದ ದೂರ ಸರಿಯುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರ ಜೊತೆ  ವಾಗ್ವಾದಕ್ಕಿಳಿದರು. ಕಾರ್ಯಕರ್ತನ ಮೊಬೈಲ್ ಕಸಿದು ಸ್ಥಳದಿಂದ ಕಳುಹಿಸಲು ಪೊಲೀಸರು ಮುಂದಾಗಿದ್ದು, ಮೊಬೈಲ್ ಕೀಳುತ್ತಿದ್ದಂತೆ ಗಲಾಟೆ ಆರಂಭಿಸಿ ಬಿಜೆಪಿ ಕಾರ್ಯಕರ್ತರ ಪರವಾಗಿ ಪೊಲೀಸರು ಇದ್ದಾರೆ ಎಂದು ಧಿಕ್ಕಾರ ಕೂಗಿ‌ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿಯನ್ನು  ಉಪಯೋಗಿಸಿಕೊಳ್ಳಲು  ಮುಂದಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ಶಾಸಕ ಅ‌ನಿಲ್ ಚಿಕ್ಕಮಾದು ಜೊತೆ ಪೊಲೀಸರ ರಾಜಿ ಸಂಧಾನ ಸಭೆಯಲ್ಲಿ ವಿಜಯ್ ಕುಮಾರ್ ಹೈಡ್ರಾಮಾ ನಡೆಸಿದರು. ಹುಣಸೂರು ಡಿವೈಎಸ್ಪಿ ಸುಂದರ್ ರಾಜ್ ಅವರಿಗೆ ಏಕ ವಚನದಲ್ಲಿ ಹೇಯ್ ಅಂತಾ‌ ಮುಗಿಬಿದ್ದರು. ಮಧ್ಯೆ ಪ್ರವೇಶಿಸಿದ  ಆಡಿಷನಲ್ ಎಸ್.ಪಿ. ಸ್ನೇಹ ಪರಿಸ್ಥಿತಿ ತಿಳಿಗೊಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ‌ ವರ್ತನೆಗೆ ಕಾಂಗ್ರೆಸ್ಸಿಗರಿಂದಲೇ ಆಕ್ಷೇಪ ವ್ಯಕ್ತವಾಗಿದೆ.  ರಾಜಿ ಸಂಧಾನ‌ ಸಭೆಯಲ್ಲಿ ಅನಗತ್ಯವಾಗಿ ಪೊಲೀಸರ ಮೇಲೆ ವಿಜಯ್ ಕುಮಾರ್ ಎಗರಾಡಿದರು.
ಕರಿಗೌಡ್ರ ಬೀದಿ 112,113 ರಲ್ಲಿ ಪೊಲೀಸ್ ಮತ್ತು ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರ ಲಾಠಿ ಏಟಿಗೆ ಕಾಂಗ್ರೆಸ್  ಕಾರ್ಯಕರ್ತ ಅಭಿಷೇಕ್ ಗಾಯಗೊಂಡಿದ್ದು, ಯುವಕನಿಗೆ ಹುಣಸೂರು ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: