
ಪ್ರಮುಖ ಸುದ್ದಿ
ಕಾಫಿ ಬೆಳೆಗಾರರ ನೆರವಿಗೆ ಬರಲು ಮನವಿ
ರಾಜ್ಯ( ಮಡಿಕೇರಿ) ಡಿ.6 :- ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಸಂಭವಿಸಿದ ಮಳೆಹಾನಿಯಿಂದ ಉಂಟಾಗಿರುವ ಕಾಫಿ ಬೆಳೆ ನಷ್ಟವನ್ನು ಕಾಫಿ ಮಂಡಳಿ ಸಮಗ್ರ ವಿಶ್ಲೇಷಣೆ ನಡೆಸಬೇಕು ಮತ್ತು ಬೆಳೆಗಾರ ಸಂಘ ಸಂಸ್ಥೆಗಳಿಂದ ಮಾಹಿತಿ ಪಡೆದು ಅಂದಾಜು ಪಟ್ಟಿಯನ್ನು ತಯಾರಿಸಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಕಾಫಿ ಉತ್ಪಾದನೆಯ ನಿರ್ವಹಣಾ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಾರ್ಮಿಕರ ವೇತನ, ರಸಗೊಬ್ಬರಗಳು, ಕೀಟನಾಶಕಗಳು, ರಾಸಾಯನಿಕಗಳು ಮತ್ತು ಕೃಷಿ ಸಾಮಾಗ್ರಿಗಳ ವೆಚ್ಚ ದುಬಾರಿಯಾಗಿದೆ. ಈ ನಡುವೆಯೇ ಪ್ರಾಕೃತಿಕ ವಿಕೋಪ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. (ಕೆಸಿಐ,ಎಸ್.ಎಚ್)