ಮೈಸೂರು

ಪಾದಚಾರಿಗಳಿಗೆ ರಸ್ತೆ ಬದಿ ವ್ಯಾಪಾರಿಗಳಿಂದ ಮುಕ್ತಿ ಕೊಡಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ‘ನಾನ್ ಹ್ಯಾಕಿಂಗ್ ಝೋನ್’

ಮೈಸೂರು,ಡಿ.6:-  ಪಾದಚಾರಿಗಳಿಗೆ ರಸ್ತೆ ಬದಿ ವ್ಯಾಪಾರಿಗಳಿಂದ ಮುಕ್ತಿ ಕೊಡಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರಪಾಲಿಕೆ ‘ನಾನ್ ಹ್ಯಾಕಿಂಗ್ ಝೋನ್’ ಘೋಷಿಸಲು ತೀರ್ಮಾನಿಸಿದೆ.

ನಗರದ ವಾಣಿ ವಿಲಾಸ ಆವರಣದಲ್ಲಿ ನಡೆದ ಟೌನ್ ವೆಂಡ್ಡಿಂಗ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ನಗರದಲ್ಲಿ ರಸ್ತೆಬದಿ ವ್ಯಾಪಾರಿಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಗರದ ವಿವಿಧೆಡೆ ಇರುವ ರಸ್ತೆಬದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಇವರಿಗೆ ನಿಗದಿತ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವ ಕುರಿತು ನಿರ್ಧರಿಸಲಾಯಿತು.

ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಪುರಭವನದ ಸುತ್ತಮುತ್ತ, ರಮಾವಿಲಾಸ ರಸ್ತೆ, ಗಾಂಧಿಚೌಕದ ಸುತ್ತಮುತ್ತ, ದೇವರಾಜ ಅರಸು ರಸ್ತೆ, ಅರಮನೆಯ ನಾಲ್ಕು ದಿಕ್ಕು, ಕೃಷ್ಣವಿಲಾಸ ರಸ್ತೆ, ಜೆ.ಕೆ.ಮೈದಾನದ ಸುತ್ತ, ರೈಲ್ವೆ ನಿಲ್ದಾಣದ ಸುತ್ತ, ಚಾಮರಾಜ ಜೋಡಿ ರಸ್ತೆ, ಇರ್ವಿನ್  ರಸ್ತೆ, ಕೆ.ಆರ್.ವೃತ್ತ, ಹೈವೇ ವೃತ್ತ, ಧನ್ವಂತ್ರಿ ರಸ್ತೆ ವ್ಯಾಪ್ತಿಯನ್ನು ‘ನಾನ್ ಹ್ಯಾಕಿಂಗ್ ಜೋನ್’ ಎಂದು ಗುರುತಿಸಲು ತೀರ್ಮಾನಿಸಲಾಯಿತು. ಸದರಿ ಸ್ಥಳಗಳ ಪಾದಚಾರಿ ಮಾರ್ಗದಲ್ಲಿ ಯಾವುದೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡದಂತೆ ತೀರ್ಮಾನಿಸಲಾಯಿತು.

ರಸ್ತೆಬದಿ ವ್ಯಾಪಾರಿಗಳಿಂದ ಸಾರ್ವಜನಿಕರು, ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ, ನಿಗದಿತ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸುವಂತೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ರಸ್ತೆಬದಿ ವ್ಯಾಪಾರಿಗಳು ಅನಧಿಕೃತವಾಗಿ ಎಲ್ಲೆಂದರಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದಾಗಿ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರು, ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಜೋನ್ ಘೋಷಣೆಯಿಂದಾಗಿ ಎಲ್ಲೆಂದರಲ್ಲಿ ವ್ಯಾಪಾರ ನಡೆಸಿ ಕಿರಿ ಕಿರಿ ಉಂಟು ಮಾಡುವವರಿಗೆ ಕಡಿವಾಣ ಬೀಳಲಿದೆ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರ್ಯಾಯ ಸ್ಥಳಕ್ಕೆ ಸೂಚಿಸಲಾಗಿದ್ದು,. ಇದಕ್ಕಾಗಿ ನಗರ ಪಾಲಿಕೆ ವಲಯ  ಕಚೇರಿ ವ್ಯಾಪ್ತಿಯ ಸಹಾಯಕ ಆಯುಕ್ತರು, ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ನಗರ ಪಾಲಿಕೆ ಸದಸ್ಯರು ಒಟ್ಟುಗೂಡಿ ಸೂಕ್ತ ಜಾಗ ಗುರುತಿಸುವುದು. ಮುಂದಿನ ಸಭೆ ವೇಳೆಗೆ ಈ ಜಾಗದ ಆಯ್ಕೆಯನ್ನು ಅಂತಿಮಗೊಳಿಸುವಂತೆ ಅಧಿಕಾರಿಗಳಿಗೆ ಮಹಾಪೌರ ಪುಷ್ಪಲತಾ ಜಗನ್ನಾಥ್ ಸೂಚನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: