ಪ್ರಮುಖ ಸುದ್ದಿ

ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣ : ತಪ್ಪಿಸಿಕೊಳ್ಳಲೆತ್ನಿಸಿದ ನಾಲ್ವರು ಆರೋಪಿಗಳು ಪೊಲೀಸ್ ಎನ್ ಕೌಂಟರ್ ಗೆ ಬಲಿ

ದೇಶ(ಹೈದ್ರಾಬಾದ್)ಡಿ.6:- ಇತ್ತೀಚೆಗೆ ಹೈದರಾಬಾದ್ ನಲ್ಲಿ  ಪಶುವೈದ್ಯೆಯೋರ್ವರ ಮೇಲೆ ಸಾಮೂಹಿಕ ಅತ್ಯಾಚಾರನಡೆಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳು ಪಶುವೈದ್ಯೆಯನ್ನು  ದಹನ ಜಾಗದಲ್ಲಿಯೇ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.

ಅತ್ಯಾಚಾರ ನಡೆಸಿ ಜೀವಂತವಾಗಿ ಸುಟ್ಟ ಪ್ರಕರಣದಲ್ಲಿ ಸಿಕ್ಕಿಬಿದ್ದ ನಾಲ್ವರು ಆರೋಪಿಗಳನ್ನು ಪೊಲೀಸ್ ಎನ್ಕೌಂಟರ್ ನಲ್ಲಿ ಕೊಲ್ಲಲಾಗಿದೆ.   ತೆಲಂಗಾಣ ಪೊಲೀಸರು ಸುದ್ದಿಯನ್ನು ದೃಢ ಪಡಿಸಿದ್ದಾರೆ. ಆರೋಪಿಗಳನ್ನು ಅಪರಾಧ ನಡೆಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಎನ್ಕೌಂಟರ್ ಮಾಡಬೇಕಾಗಿ ಬಂತು ಎಂದಿದ್ದಾರೆ. ಪಶುವೈದ್ಯೆಯನ್ನು ಜೀವಂತವಾಗಿ ಸುಟ್ಟುಹಾಕಿದ ಅದೇ ಫ್ಲೈಓವರ್ ಅಡಿಯಲ್ಲಿ ಆರೋಪಿಯನ್ನು ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಗಳನ್ನು ಹತ್ತು ದಿನಗಳ ಕಸ್ಟಡಿ ಕೋರಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸತತ ಮೂರು ದಿನಗಳ ಕಾಲ  ನ್ಯಾಯಾಲಯದಲ್ಲಿ ವಾದಗಳನ್ನು ಆಲಿಸಿದ ನಂತರ ಏಳು ದಿನಗಳ ಪೊಲೀಸ್ ಕಸ್ಟಡಿ ನೀಡಲಾಗಿತ್ತು.

ಘಟನೆಯ 36 ಗಂಟೆಗಳ ಒಳಗೆ ಪೊಲೀಸರು  ಆರೋಪಿಗಳನ್ನು ಬಂಧಿಸಿದ್ದರು.  ಮರುದಿನ, ಇವರನ್ನು ಶಾದ್ ನಗರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು, ಅಲ್ಲಿಂದ ಎಲ್ಲರನ್ನು ಚೆರ್ಲಾಪಲ್ಲಿ ಜೈಲಿಗೆ ಕಳುಹಿಸಲಾಯಿತು.

ಈ ಪ್ರಕರಣದಲ್ಲಿ ಹೈದರಾಬಾದ್‌ನ ವಕೀಲರು ನಾಲ್ವರು ಆರೋಪಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದಿಸದಿರಲು ನಿರ್ಧರಿಸಿದ್ದರು. ವೈದ್ಯರ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಿಗೆ ಯಾವುದೇ ಕಾನೂನು ನೆರವು ನೀಡುವುದಿಲ್ಲ ಎಂದು ಶಾದ್ ನಗರ ಬಾರ್ ಅಸೋಸಿಯೇಷನ್   ಪ್ರಕಟಿಸಿತ್ತು. ಅದರ ನಂತರ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ತ್ವರಿತ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವನ್ನು ರಚಿಸುವುದಾಗಿ ಘೋಷಿಸಿದರು. ಏತನ್ಮಧ್ಯೆ, ಡಿಸೆಂಬರ್ 6 ರ ಬೆಳಿಗ್ಗೆ, ಅವರು ಪೊಲೀಸರ ಎನ್ಕೌಂಟರ್ ಗೆ ಬಲಿಯಾಗಿದ್ದಾರೆ. (ಎಸ್.ಎಚ್)

 

 

Leave a Reply

comments

Related Articles

error: