ಲೈಫ್ & ಸ್ಟೈಲ್

ಮೂತ್ರಪಿಂಡದ ಆಯಸ್ಸು ವೃದ್ಧಿಗೆ ಸರಳ ವಿಧಾನ

ಮೂತ್ರಪಿಂಡವು ದೇಹದಲ್ಲಿ ಒಂದು ಬಹುಮುಖ್ಯ ಅಂಗವಾಗಿದ್ದು, ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸಿ, ಕಲ್ಮಶಗಳನ್ನು ಹೊರದಬ್ಬುವ ಕೆಲಸ ನಿರ್ವಹಿಸುತ್ತದೆ. ಇಂತಹ ಅಂಗವನ್ನು ಅತೀ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿ ದೊರಕುವ ಔಷಧಿ ಗುಣ ಹೊಂದಿರುವ ವಸ್ತುಗಳಿಂದ ಸರಳವಾಗಿ ಶುದ್ಧೀಕರಿಸಬಹುದು.

ವಿಧಾನ: ಒಂದು ಹಸಿರಾದ ಸ್ವಚ್ಛವಾಗಿ ತೊಳೆದ ತಾಜಾ ಕೊತ್ತಂಬರಿ ಕಟ್ಟನ್ನು ತೆಗೆದುಕೊಂಡು, ಅದನ್ನು ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿ ಒಂದು ಪಾತ್ರೆಯಲ್ಲಿ ಶುದ್ಧ ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ಕುದಿಸಿ, ನಂತರ ಆರಿಸಿ ಶೋಧಿಸಿ ಸ್ವಚ್ಛವಾದ ಉತ್ತಮ ದರ್ಜೆಯ ಬಾಟಲಿ ಅಥವಾ ಪಾತ್ರೆಯಲ್ಲಿ ಹಾಕಿ ಫ್ರಿಜ಼್‍ನಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.

ಈ ಪಾನೀಯವನ್ನು ದಿನಂಪ್ರತಿ ಒಂದು ಲೋಟ ರಾತ್ರಿ ಮಲಗುವ ಮುನ್ನ ಕುಡಿದರೆ ಹೆಚ್ಚುವರಿಯಾಗಿ ಶೇಖರಣೆಗೊಂಡಿರುವ ಕಲ್ಮಶಗಳು ಹೊರಹೋಗಿ ಮೂತ್ರಪಿಂಡದ ಕೆಲಸ ಸುಲಭವಾಗುತ್ತದೆ. ಈ ಸರಳ ಸೂತ್ರ ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave a Reply

comments

Related Articles

error: