ಮೈಸೂರು

ಡಾ.ಬಿ.ಆರ್. ಅಂಬೇಡ್ಕರ್‍ ಅವರ 63ನೇ ವರ್ಷದ ಪರಿನಿರ್ವಾಣ ದಿನ : ಪ್ರತಿಮೆಗೆ ಪುಷ್ಪಾರ್ಚನೆ ; ಗೌರವ ಸಲ್ಲಿಕೆ

ಮೈಸೂರು,ಡಿ.6:- ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರಪಾಲಿಕೆ, ಸಮಾಜಕಲ್ಯಾಣ ಇಲಾಖೆ  ವತಿಯಿಂದ ರಾಷ್ಟ್ರನಾಯಕ, ಸಂವಿಧಾನ ಶಿಲ್ಪಿ  ಡಾ.ಬಿ.ಆರ್. ಅಂಬೇಡ್ಕರ್‍ ಅವರ 63ನೇ ವರ್ಷದ ಪರಿನಿರ್ವಾಣ ದಿನದ ಅಂಗವಾಗಿ ಇಂದು ಬೆಳಿಗ್ಗೆ   ಮೈಸೂರಿನ ಟೌನ್‍ಹಾಲ್ ಆವರಣದಲ್ಲಿರುವ ಡಾ. ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಷ್ಪಾರ್ಚನೆ ಗೈದು ಗೌರವ ಸಮರ್ಪಿಸಿದರು. ಈ ವೇಳೆ ಮಾಜಿ ಸಂಸದ.ಆರ್ ಧ್ರುವನಾರಾಯಣ್ ,ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಜಿಲ್ಲಾಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಡಿಸಿಪಿ ಮುತ್ತುರಾಜ್ ಎಂ, ಪ್ರಾದೇಶಿಕ ಆಯುಕ್ತರಾದ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

 

 

ಇದೇ ವೇಳೆ ನಗರ ಕಾಂಗ್ರೆಸ್ ವತಿಯಿಂದಲೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಲಾಯಿತು. ಗ್ರಾಮಾಂತರ ಅಧ್ಯಕ್ಷರಾದ ಡಾ. ಬಿ ಜೆ ವಿಜಯ್ ಕುಮಾರ್ ,ನಗರಾಧ್ಯಕ್ಷ ಆರ್ ಮೂರ್ತಿ,ಮಾಜಿ ಸಚಿವ ಎಂ.ಕೆ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: