ಮೈಸೂರು

ಅಂತರರಾಷ್ಟ್ರೀಯ ಸಮ್ಮೇಳನ: ಮಾ.6 ರಿಂದ

ಜೆಎಸ್ಎಸ್ ವಿಶ್ವವಿದ್ಯಾಲಯ ಮತ್ತು ಅಮೇರಿಕೆಯ ಮೇಯೋ ಕ್ಲಿನಿಕ್ ಸಹಭಾಗಿತ್ವದಲ್ಲಿ ಮಾರ್ಚ್ 6 ರಿಂದ 8 ರವರೆಗೆ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಜೆಎಸ್ಎಸ್ ಆಸ್ಪತ್ರೆಯ ಬಸವನಗೌಡಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 6 ರಂದು ಬೆಳಿಗ್ಗೆ 10.30 ಕ್ಕೆ  ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ನಂತರ ಹೃದ್ರೋಗ ತಜ್ಞರೊಡನೆ ಸಂವಾದ ಕಾರ್ಯಕ್ರಮ ಹಾಗೂ ತಜ್ಞ ವೈದ್ಯರಿಗೆ ಮುಂದುವರಿದ ಕಲಿಕಾ ಕಾರ್ಯಕ್ರಮಗಳಲ್ಲದೇ ವಿವಿಧ ಹೃದಯ ಸಂಬಂಧಿ ರೋಗಗಳ ಬಗ್ಗೆ ತಜ್ಞರು ಬೆಳಕು ಚೆಲ್ಲಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೃದ್ರೋಗ ತಜ್ಞ ಡಾ.ನಾಗರಾಜ್, ಡಾ.ಶಾಮಪ್ರಸಾದ್ ಶೆಟ್ಟಿ, ಡಾ.ಮಂಜಪ್ಪ, ಡಾ.ಕುಶಾಲಪ್ಪ, ಡಾ.ಗುರುಸ್ವಾಮಿ ಹಾಜರಿದ್ದರು.

Leave a Reply

comments

Related Articles

error: