ಮೈಸೂರು

‘ಅಂಗವಿಕಲರ ಕಾನೂನು ಮತ್ತು ಸೌಲಭ್ಯಗಳು’ ಕುರಿತ ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ

ಮೈಸೂರು,ಡಿ.6:- ವಿಶ್ವ ವಿಶೇಷಚೇತನರ ದಿನ ಅಂಗವಾಗಿ ಜೆ.ಎಸ್.ಎಸ್. ವಾಕ್ ಶ್ರವಣ ಸಂಸ್ಥೆ ವತಿಯಿಂದ  ಜೆ ಎಸ್ ಎಸ್ ನ ರಾಜೇಂದ್ರ ಭವನದಲ್ಲಿ ‘ಅಂಗವಿಕಲರ ಕಾನೂನು ಮತ್ತು ಸೌಲಭ್ಯಗಳು’ ಕುರಿತ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ನಡೆದ ಕಾರ್ಯಕ್ರಮಕ್ಕೆ   ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶ ಎಸ್.ಕೆ ವಂಟಿಗೋಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ  ಅವರು ಇವರು ಅಂಗವಿಕಲರಲ್ಲ, ವಿಶೇಷ ಚೇತನರು. ಅವರಲ್ಲಿ ವಿಶೇಷವಾದ ಶಕ್ತಿ ಇರಲಿದೆ. ಸೇವಾ ಸಂಸ್ಥೆಗಳು ಸಂವಿಧಾನದ ಉದ್ದೇಶಗಳನ್ನು ಈಡೇರಿಸುವ ಜೊತೆಗೆ, ಸರ್ಕಾರದ ಸೌಲಭ್ಯವನ್ನು ವಿಕಲಚೇತನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕು’ಅಂಗವಿಕಲತೆ ಶಾಪವಲ್ಲ. ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದರೆ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ವಿಕಲಚೇತನರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿದರು.

ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಮತ್ತು ಸಾಮಾನ್ಯ ಜನರಿಗೆ ವಿಕಲಾಂಗತೆಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ಲಭ್ಯವಿರುವ ಯೋಜನೆಗಳು ಹಾಗೂ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ, ಜೆಎಸ್ ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ನಟರಾಜು,ವೈದ್ಯಕೀಯ ಕಾಲೇಜಿನ ನಿರ್ದೇಶಕ ಆರ್. ಮಹೇಶ್  ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: