ಮೈಸೂರು

ಮಾರ್ಬಲ್ಸ್ ಬಿದ್ದು ಯುವಕ ಸಾವು ಪ್ರಕರಣ : ಮಾಲಕನಿಂದ 15ಲಕ್ಷ ರೂ.ಪರಿಹಾರ

ಲಾರಿಯಿಂದ ಮಾರ್ಬಲ್ಸ್ ಇಳಿಸುವಾಗ ಆಯತಪ್ಪಿ ಯುವಕನ  ತಲೆಯ ಮೇಲೆ ಮಾರ್ಬಲ್ಸ್  ಬಿದ್ದು ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ಮಾರ್ಬಲ್ಸ್ ಮಾಲಕ ಮೃತ ಯುವಕನ ಕುಟುಂಬಕ್ಕೆ 15ಲಕ್ಷ ರೂ.ಪರಿಹಾರವನ್ನು ನೀಡಿದ್ದಾರೆ.

ಶುಕ್ರವಾರ ಮಧ್ಯಾಹ್ನ  ನಂಜುಮಳಿಗೆ ಸಮೀಪದ ರಾಜಸ್ಥಾನ್ ಮಾರ್ಬಲ್ ನಲ್ಲಿ  ಲಾರಿಯಿಂದ ಮಾರ್ಬಲ್ಸ್ ಇಳಿಸುವಾಗ ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕನಂದಿ ನಿವಾಸಿ ಗಿರೀಶ್ ಎಂಬ ಯುವಕನ ತಲೆಯ ಮೇಲೆ ಮಾರ್ಬಲ್ಸ್ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಅವಘಡ ಸಂಭವಿಸುತ್ತಿದ್ದಂತೆ ಮಾಲಕ ಸ್ಥಳದಿಂದ ಪರಾರಿಯಾಗಿದ್ದ. ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

comments

Related Articles

error: