
ದೇಶಪ್ರಮುಖ ಸುದ್ದಿ
ಅತ್ಯಾಚಾರಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಪೊಲೀಸರೇನು ಮಾಡಬೇಕು: ಸ್ವಾತಿ ಮಲಿವಾಲ್
ನವದೆಹಲಿ,ಡಿ.6-ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆಯ ನಾಲ್ವರು ಆರೋಪಿಗಳ ಎನ್ ಕೌಂಟರ್ ಕುರಿತು ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅತ್ಯಾಚಾರಿಗಳು ತಪ್ಪಿಸಿಕೊಂಡು ಓಡಿದರೆ ಪೊಲೀಸರೇನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರದಲ್ಲಿ ನಡೆಯುತ್ತಿರುವ ಅತ್ಯಾಚಾರ ಕೃತ್ಯಗಳನ್ನು ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಲಿವಾಲ್, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವವರೆಗೂ ಉಪವಾಸ ಹೋರಾಟ ಕೈಬಿಡುವುದಿಲ್ಲ ಎಂದರು.
ಅತ್ಯಾಚಾರಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸದರೆ ಪೊಲೀಸರು ಏನು ಮಾಡಬೇಕು? ಇದೇ ಕಾರಣಕ್ಕೆ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತಿರುವುದು. ಇಂತಹ ಹೀನ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕೋರ್ಟ್ನ ಎಲ್ಲ ರೀತಿಯ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ಪೊಲೀಸರಿಗಿಂತ ರಾಷ್ಟ್ರದ ಕಾನೂನು ವ್ಯವಸ್ಥೆ ಪ್ರಬಲವಾಗಿಲ್ಲದಿದ್ದಾಗ ಇಂತಹ ಘಟನೆಗಳು ಪುನರಾವರ್ತಿಸುತ್ತವೆ ಎಂದು ಹೇಳಿದ್ದಾರೆ.
ಕಳೆದ 7 ವರ್ಷಗಳಿಂದ ತೆರಿಗೆದಾರರ ದುಡ್ಡಿನಿಂದ ತಿಂದು ಬದುಕಿರುವ ನಿರ್ಭಯ ಹಂತಕರನ್ನು ಉಲ್ಲೇಖಿಸಿದ ಸ್ವಾತಿ ಮಲಿವಾಲ್, ಬರ್ಬರ ಕೃತ್ಯವೆಸಗುವ ಮನುಷ್ಯರು ತೆರಿಗೆದಾರರ ದುಡ್ಡಿನಿಂದ ತಿಂದು ಬದುಕುವುದು ತಪ್ಪುತ್ತದೆ ಎಂದರು. (ಎಂ.ಎನ್)