ಕರ್ನಾಟಕಪ್ರಮುಖ ಸುದ್ದಿ

ಕೊಲ್ಲೂರು ಬೆಟ್ಟ ಅರಣ್ಯ ಪ್ರದೇಶ ಅಗ್ನಿಗಾಹುತಿ; ಬೆಂಕಿ ನಂದಿಸಲು ಅವಿರತ ಪ್ರಯತ್ನ

ಮಡಿಕೇರಿ: ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಪರಿಣಾಮ ಹಲವಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವ ಘಟನೆ ಕೊಡುಗು ಜಿಲ್ಲೆಯ ಸೋಮವಾರಪೇಟೆಯ ಆನೆಕಾಡು ಸಮೀಪದ ಕೊಲ್ಲೂರು ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಘಟನೆಯಲ್ಲಿ ಹಲವಾರು ಎಕರೆ ಅರಣ್ಯ ಸುಟ್ಟು ಸಂಪೂರ್ಣ ಭಸ್ಮವಾಗಿದೆ. ಸೊಪ್ಪಿನಿಂದ ಬಡಿದು ಬಡಿದು ಬೆಂಕಿ ನಂದಿಸಲು ಸ್ಥಳೀಯ ಜನ, ಅರಣ್ಯ ಇಲಾಖಾ ಸಿಬ್ಬಂದಿ ಪ್ರಯತ್ನಪಟ್ಟಿದ್ದಾರೆ. ಹೆಚ್ಚು ಗಾಳಿ ಬೀಸುತ್ತಿರುವುದಿಂದ  ಬೆಂಕಿಯ ಜ್ವಾಲೆ ಮತ್ತಷ್ಟು ಧಗದಹಿಸಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪ್ರಾಣಿಗಳೂ ಸಾವನಪ್ಪಿರುವ ಸಾಧ್ಯತೆ ಇದ್ದು, ಹೊಗೆಯಿಂದ ಪಕ್ಷಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳೀಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಬೆಂಕಿ ನಂದಿಸಲು‌ ಹರಸಾಹ ಪಡುತ್ತಿದ್ದಾರೆ.

Leave a Reply

comments

Related Articles

error: