ಮೈಸೂರು

ಅಶೋಕಪುರಂ ರುದ್ರ ಭೂಮಿಯಲ್ಲಿ ಮೈಸೂರು ಸಂಸ್ಥಾನದ ಆದಿಕರ್ನಾಟಕಪುರ ಕೃತಿ ಬಿಡುಗಡೆ

ಮೈಸೂರು,ಡಿ.6:-  ವಿದ್ಯಾರಣ್ಯಪುರಂನ  ಅಶೋಕಪುರಂ ರುದ್ರ ಭೂಮಿಯಲ್ಲಿ ಮೈಸೂರು ಸಂಸ್ಥಾನದ ಆದಿಕರ್ನಾಟಕಪುರ ಕೃತಿ ಬಿಡುಗಡೆ ಸಮಾರಂಭವನ್ನಿಂದು ಹಮ್ಮಿಕೊಳ್ಳಲಾಗಿತ್ತು.

ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ  ಹಾಗೂ‌ ಅಶೋಕಪುರಂನ ನಿವಾಸಿ ಸಿದ್ದಸ್ವಾಮಿ ರಚಿತ ಆದಿಕರ್ನಾಟಕಪುರ  ಕೃತಿ ಮೈಸೂರಿನ ಗೌತಮ್ ಪ್ರಕಾಶನ ಪ್ರಕಟಿಸಿರುವ ಕೃತಿಯಾಗಿದ್ದು ಈ ಪುಸ್ತಕವು ಅಶೋಕಪುರಂ ಬಡಾವಣೆ ಹೇಗಾಯಿತು ಎಂಬುದನ್ನು ಒಳಗೊಂಡಂತೆ ವಿವರಣೆ ನೀಡಿದ್ದಾರೆ. ಅಶೋಕಪುರಂ ಅಭಿಮಾನಿಗಳ‌ಬಳಗ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ  ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಾ ಬಿ ಆರ್ ಅಂಬೇಡ್ಕರ್ 63 ನೇ ಪರಿನಿರ್ವಾಣದಿನದ ನಿಮಿತ್ತ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಪತ್ರಕರ್ತ ಅಂಶಿಪ್ರಸನ್ನಕುಮಾರ್  ಕೃತಿ  ಬಿಡುಗಡೆಗೊಳಿಸಿದರು.
.ಗತಿಸಿದ ಮೂಲನಿವಾಸಿ ಪೂರ್ವಜರ ಸಮಾಧಿಗೆ   ಪುಷ್ಪಾರ್ಚನೆ ಮತ್ತು  ಮೇಣದ ದೀಪ ಹಚ್ಚುವ ಮೂಲಕ ನಮನ ಸಲ್ಲಿಸಲಾಯಿತು.  ಈ ಸಂದರ್ಭ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ ಇಂಡಿಯಾದಲ್ಲಿ ಮಹತ್ವ ದಿನ ಅಂಬೇಡ್ಕರ್ ರವರ ಪರಿನಿರ್ವಣಾ ದಿನ. ರುದ್ರಭೂಮಿಯಲ್ಲಿ ಪುಸ್ತಕ ಬಿಡುಗಡೆ ಇದೇ ಮೊದಲು‌. ಹಳ್ಳಿಯಲ್ಲಿ ಸಾಮಾನ್ಯವಾಗಿ ಪೂಜಿಸುವ ದೇವರು ಶಿವ ಎನ್ನುವರು. ಚಾತುರ್ವರ್ಣ ದೇವರನ್ನ ಪೂಜೆ ಮಾಡುವವರು ಗುಲಾಮರು. ಅಶೋಕಪುರಂಗೆ ಇತಿಹಾಸವಿದೆ.ಪುರಾಣ ವಿದೆ. ಇದು ಐತಿಹಾಸಿಕ‌ ನಗರ ಎಂದರು.

ಮಾಜಿ ಮೇಯರ್ ಪುರುಷೋತ್ತಮ್ , ಶಾಂತರಾಜು, ಬನ್ನೂರು ರಾಜು ಸಾಹಿತಿಗಳು ನಗರಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: